ಕನಕದಾಸ ಎಲ್ಲ ಕಾಲಕ್ಕೂ ಪ್ರಸ್ತುತ: ಡಾ| ಎ.ವಿ. ನಾವಡ

ಕುಂದಾಪುರ: ಕನಕದಾಸರು ಎಲ್ಲ ಕಾಲಕ್ಕೂ ಪ್ರಸ್ತುತರಾದವರು. ಅವರ ಚಿಂತನೆಗಳು ಎಂದಿಗೂ ಶ್ರೇಷ್ಠವೆನಿಸಿಕೊಳ್ಳುತ್ತದೆ. ಅವರ ಜೀವನದ ಕಥೆಗಳನ್ನು ನೋಡಿಕೊಂಡು ಬದುಕಿನ ಐತಿಹ್ಯಗಳನ್ನು ಸಂಶೋಧಿಸಬೇಕು. ಭಕ್ತಿ ಸಾಹಿತ್ಯ, ಕೀರ್ತನೆಗಳಲ್ಲಿ ಆಧ್ಯಾತ್ಮಕ ಚಿಂತನೆಗಳಿದ್ದರೂ ಸಮುದಾಯದಲ್ಲಿ ಮೇಲುಕೀಳು ಎಂಬ ಭೇದ ಮಾಡದೇ ಎಲ್ಲರಲ್ಲಿ ಶ್ರೇಷ್ಠರೆನಿಸಿಕೊಂಡವರು ಕನಕದಾಸರು ಎಂದು ಸಂಶೋಧಕ ಡಾ| ಎ.ವಿ. ನಾವಡ ಅಭಿಪ್ರಾಯಪಟ್ಟರು.
     ಅವರು ಭಂಡಾರ್ಕಾರ್ ಕಾಲೇಜಿನ ಡಾ| ಎಚ್‌. ಶಾಂತಾರಾಮ್‌ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಮತ್ತು ಕನಕದಾಸ ಅಧ್ಯಯನ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ 'ಮುತ್ತು ಬಂದಿದೆ ಕೇರಿಗೆ' ರಸಗ್ರಹಣ ಶಿಬಿರದಲ್ಲಿ ಕನಕರ ಜೀವನ, ಕೃತಿ ದರ್ಶನ ಕುರಿತು ವಿಶೇಷ ಉಪನ್ಯಾಸ ನೀಡಿದರು.
     ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಸಮಾಜದಲ್ಲಿನ ಅಸಮಾನತೆಯನ್ನು ಚುಚ್ಚುವುದರ ಮೂಲಕ ಸಾಮರಸ್ಯ ಕುರಿತು ಹೇಳಿದ್ದಾರೆ. ಸಾಂಸ್ಕೃತಿಕ ಚಿತ್ರಣ, ಸಾಹಿತ್ಯ, ಚರಿತ್ರೆ ಕಟ್ಟುವ ಆಕರಗಳನ್ನು, ಕಾವ್ಯ, ಪಾಡªನಗಳನ್ನು 'ರಾಮದಾನ್ಯ ಚರಿತ್ರೆ'ಯಲ್ಲಿ ಕಾಣಬಹುದು. ಆದುದರಿಂದ ಅವರ ಸಾಹಿತ್ಯ ಇಂದಿಗೂ ಪ್ರಸ್ತುತ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಣಿಪಾಲದ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌, ಸಾಮಾಜಿಕ ಕಳಕಳಿ ಬರಬೇಕಾದರೆ ವ್ಯಕ್ತಿಯ ವ್ಯಕ್ತಿತ್ವ ಮುಖ್ಯವಾಗುತ್ತದೆ. ಜಾತಿ ವೈಷಮ್ಯ, ಮೇಲುಕೀಳು ಇಂತಹ ಸಾಮಾಜಿಕ ಸ್ಥಿತಿಯಿಂದ ಸಾಮಾಜಿಕ ಕಳಕಳಿ ಹುಟ್ಟಿಕೊಳ್ಳುತ್ತದೆ. ಕೃತಿ, ಕಥೆ ಮತ್ತು ಕೀರ್ತನೆಗಳ ಹಿಂದೆ ಇರುವ ತತ್ವಗಳನ್ನು ಸಾಮಾನ್ಯರಿಗೆ ತಿಳಿಸಲು ಕಥೆಕಟ್ಟಿ ಸಂಶೋಧನೆಗಳ ಮೂಲಕ ತಿಳಿಸುವ ಪ್ರಯತ್ನ ಮಾಡಿದ ಕನಕದಾಸರ ಧ್ಯೇಯ ಬೆಳೆಸುವ ಪ್ರಯತ್ನ ಆಗಬೇಕಾಗಿದೆ ಎಂದರು. ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಕೃಷ್ಣ ಭಟ್‌ ಉಪಸ್ಥಿತರಿದ್ದರು.
    ಈ ಸಂದರ್ಭ ಗಾಯಕಿ ಸಂಗೀತಾ ಬಾಲಚಂದ್ರ ಅವರ ನೇತೃತ್ವದಲ್ಲಿ ಗಾಯನ ಶಿಬಿರ ನಡೆಯಿತು.
     ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಎನ್‌.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕಿ ಪ್ರೊ| ರೇಖಾ ಬನ್ನಾಡಿ ವಂದಿಸಿದರು. ಕನ್ನಡ ಉಪನ್ಯಾಸಕ ರಂಜಿತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com