ಮನಸ್ಸಿಗೆ ವಿದ್ಯೆ ನೀಡಿದಾಗ ಉತ್ತಮ ವ್ಯಕ್ತಿತ್ವದಿಂದ ಸದೃಡ ಸಮಾಜ: ಮುಕ್ತಾ ಮಾತಾಜಿ

ಕುಂದಾಪುರ: ಸಮಾಜದ ಜನರೊಂದಿಗೆ ಬೆರೆತು ಉತ್ತಮ ಬದುಕನ್ನು ಕಲಿಸಿಕೊಡುವುದರೊಂದಿಗೆ ಯಾವುದನ್ನು ಬಿಡಬೇಕು, ಯಾವುದನ್ನು ಕಲಿಯಬೇಕು ಎಂಬುದನ್ನು ಕಲಿಸಿಕೊಡುವುದೇ ಯೋಗ ಎಂದು  ಪ್ರಗತಿಪರ ರೈತ ಕಟ್ಕೆರೆ ಪ್ರೇಮಾನಂದ ಶೆಟ್ಟಿ ಹೇಳಿದರು.
 ಅವರು ಆರೋಗ್ಯ ಮತ್ತು  ಸಾಂಸ್ಕøತಿಕ ವಿಕಾ¸ ಕೇಂದ್ರ ಬ್ರಹ್ಮಾವರ, ಪ್ರಗತಿ ಯುವಕ ಮಂಡಲ ಹುಣ್ಸೆಮಕ್ಕಿ, ಜ್ಞಾನವಿಕಾಸ ಯೋಗ ಕುಂದಾಪುರ, ಶಾಲಾಭಿವೃದ್ಧಿ ಸಮಿತಿ ಹುಣ್ಸೆಮಕ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ಜ್ಞಾನ ವಿಕಾಸ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದೇಹ, ಮನಸ್ಸು, ಬುದ್ದಿ,ಆತ್ಮದೊಂದಿಗೆ ಜೋಡಿಸಿ ನಿರಂತರತೆಯನ್ನು ಕಾಪಾಡಿದಾಗ ಶೃದ್ಧೆ, ನಿಷ್ಠೆ, ಭಕ್ತಿಯಿಂದ ಅಂತರಂಗ ಶುದ್ಧೀಕರಣಗೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾದ್ಯ ಎಂದರು.
ಜ್ಞಾನ ವಿಕಾಸ ಯೋಗ ತರಬೇತುದಾರೆ ಶ್ರೀಮತಿ ಮುಕ್ತಾ ಮಾತಾಜಿ ಸಭೆಯ ಅಧ್ಯಕ್ಷತೆ ವಹಿಸಿ, ದೇಹಕ್ಕೆ ವಿದ್ಯೆ ನೀಡುವುದರ ಜೊತೆಗೆ ಮನಸ್ಸಿಗೆ ವಿದ್ಯೆ ನೀಡಿದಾಗ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಬದುಕಿನಲ್ಲಿ ನಲಿವು ಗೆಲುವು ಜಾಸ್ತಿಯಾಗಿ ಉತ್ತಮ ಕೌಟುಂಬಿಕ ಸಂಬಂಧ, ಮಾನವೀಯ ಮೌಲ್ಯ,ಸಂಸ್ಕಾರ ಸಾಕಾರಗೊಂಡು  ಉತ್ತಮ ವ್ಯಕ್ತಿತ್ವದೊಂದಿಗೆ ಸದೃಡ ಸಮಾಜ ನಿರ್ಮಿಸಲು ಸಾದ್ಯ ಎಂದರು. 
ಸಭೆಯಲ್ಲಿ ಪ್ರಗತಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಪ್ರಭು, ಯುವಜನ ಸೇವಾ ಕ್ರೀಡಾಧಿಕಾರಿ ದಿನಕರ್ ಹೆಗ್ಡೆ, ಯೋಗ ಶಿಬಿರದ ಉಸ್ತುವಾರಿ ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಹಿರಿಯ ಯೋಗಸಾಧಕರಾದ ಸೀತಾರಾಮ ಆಚಾರ್ಯ, ಲತಾ ರತ್ನಾಕರ್ ಶೆಟ್ಟಿ ಯೋಗದ ಬಗ್ಗೆ  ಅನುಭವಗಳನ್ನು ಹಂಚಿಕೊಂಡರು.
ಸದಾನಂದ ಶಾನ್‍ಬಾಗ್ ಸ್ವಾಗತಿಸಿದರು. ಉಪನ್ಯಾಸಕ ಸುಧಾಕರ್ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಬಣ್ಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಪ್ರದೀಪ ಶೆಟ್ಟಿ ವಂದಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com