ತೆಂಗಿನ ನಾರಿನ ಉತ್ಪನ್ನಗಳ ತಯಾರಿಕೆ ತರಬೇತಿ

ಕುಂದಾಪುರ: ತಾಲೂಕಿನ ಹಳ್ಳಿಹೊಳೆ, ರಟ್ಟಾಡಿ, ಕೇರಾಡಿ, ಮಡಾ ಮಕ್ಕಿ, ಶೇಡಿಮನೆ, ಮಚ್ಚಟ್ಟು, ಎಡಮೊಗೆ, ಹೊಸಂಗಡಿ, ಅಮಾಸೆಬೈಲು, ಜಡ್ಕಲ್‌ ಮುದೂರು ಹಾಗೂ ಕಾರ್ಕಳ ತಾಲೂಕಿನ ನಡಾ³ಲು, ಅಂಡಾರು, ವರಂಗ, ಶಿರ್ಲಾಲು, ಕಬ್ಬಿನಾಲೆ, ಈದು, ನೂರಾಲ್‌ ಬೆಟ್ಟು, ಮಾಳ, ಕೆರ್ವಾಶೆ ಹೆಬ್ರಿ,ಮುದ್ರಾಡಿ ಗ್ರಾಮಗಳ ಯುವಕ/ಯುವತಿಯರಿಗೆ ತೆಂಗಿನ ನಾರಿನ ಉತ್ಪನ್ನಗಳ ತಯಾರಿಕೆಯಲ್ಲಿ ಎರಡು ತಿಂಗಳು ತರಬೇತಿಯನ್ನು ನೀಡಲಾಗುವುದು.
       ತರಬೇತಿ ಸಮಯದಲ್ಲಿ ತಿಂಗಳಿಗೆ ರೂ.1500 ಶಿಷ್ಯವೇತನ ನೀಡಲಾಗುವುದು. ತರಬೇತಿ ಮುಗಿದ ನಂತರ ಸ್ವಯಂ ಉದ್ಯೋಗ ಮಾಡಲು ಅನುಕೂಲವಾಗುವಂತೆ ರೂ. 5000 ಬೆಲೆಯ ತೆಂಗಿನ ನಾರಿನ ಚರಕಗಳನ್ನು ನೀಡಲಾಗುವುದು. ಅಭ್ಯರ್ಥಿಯು ಕನಿಷ್ಟ 18 ವರ್ಷಕ್ಕೆ ಮೇಲ್ಪಟ್ಟು ಕನ್ನಡ ಓದಲು ಮತ್ತು ಬರೆಯಲು ಬರುವವರಾಗಿಬೇಕು. ಪ.ಜಾ/ಪಂಗಡದ ಮತ್ತು ಹಿಂದುಳಿದ/ಅಲ್ಪಸಂಖ್ಯಾಕರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ಜು. 10ರೊಳಗೆ ಹೆಸರು ಮತ್ತು ವಿಳಾಸ, ವಿದ್ಯಾರ್ಹತೆ, ಜನ್ಮದಿನಾಂಕ/ವಯಸ್ಸು, ಜಾತಿ, ವಾರ್ಷಿಕ ವರಮಾನ ಮುಂತಾದ ವಿವರಗಳನ್ನೊಳಗೊಂಡ ಅರ್ಜಿಯನ್ನು ಸೂಕ್ತ ದಾಖಲಾತಿ ಮತ್ತು ಫೋಟೋದೊಂದಿಗೆ ಹಾಗೂ ಗ್ರಾ. ಪಂ. ದೃಢೀಕರಣದೊಂದಿಗೆ ನಿಗದಿತ ನಮೂನೆಯಲ್ಲಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಸಿ-36, ಶಿವಳ್ಳಿ ಕೈಗಾರಿಕಾ ವಸಾಹತು, ಮಣಿಪಾಲ, ಉಡುಪಿ ಜಿಲ್ಲೆಯವರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com