ಮತ್ತೆ ಮಳೆಯ ಅಬ್ಬರ; ನದಿಪಾತ್ರ ಜಲಾವೃತ -ನೆರೆ ಭೀತಿ

ಕುಂದಾಪುರ: ತಾಲೂಕಿನ ಬೈಂದೂರು, ಸಿದ್ದಾಪುರ ಭಾಗಗಳಲ್ಲಿ ವಿಪರೀತ ಮಳೆಯಾಗುತ್ತಿದ್ದು, ತಾಲೂಕಿನ ಪಂಚ ಮಹಾನದಿಗಳು ತುಂಬಿಹರಿಯುತ್ತಿವೆ. ಈ ವಾರದಲ್ಲಿ ಎರಡನೇ ಬಾರಿ ನದಿ ಪಾತ್ರದ ತಗ್ಗು ಪ್ರದೇಶ ಜಲಾವೃತಗೊಂಡು ಮತ್ತೂಮ್ಮೆ ನೆರೆಭೀತಿ ಉಂಟಾಗಿದೆ. ಸೌಪರ್ಣಿಕಾ, ವಾರಾಹಿ ನದಿಗಳಲ್ಲಿ ಮತ್ತೆ ನೀರು ಏರಿಕೆಯಾಗಿದ್ದು, ಈ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ.
      ತಾಲೂಕಿನ ಕುಬ್ಜಾ, ವಾರಾಹಿ, ಚಕ್ರಾ, ಸೌಪರ್ಣಿಕಾ, ಕೀಟಕಿ ನದಿಗಳು ತುಂಬಿಹರಿಯುತ್ತಿದ್ದು, ನದಿ ತಟದಲ್ಲಿರುವ ಕೊಲ್ಲೂರು, ನಾಡ, ಸೇನಾಪುರ, ಬಡಾಕೆರೆ, ತೊಪುÉ, ಸಾಲುºಡ, ಹೇರೂರು, ತ್ರಾಸಿ, ಹೊಸಾಡು, ನಾವುಂದ, ಚಿಕ್ಕಳ್ಳಿ ಮರವಂತೆ ಮೊದಲಾದೆಡೆ ಮತ್ತೂಮ್ಮೆ ನೆರೆಭೀತಿ ಉಂಟಾಗಿದೆ. ಆದರೆ ಕಳೆದ ಬಾರಿಯ
ಷ್ಟು ನೆರೆ ಏರಿಲ್ಲ.

      ಉಪ್ಪುಂದ - ಬೈಂದೂರು ನಡುವೆ ಹರಿಯುತ್ತಿರುವ ಸುಮನಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಬಿಜೂರು ಪರಿಸರದಲ್ಲಿ ಭಾರಿ ನೆರೆ ಕಾಣಿಸಿಕೊಂಡಿದೆ. ಇದರ ಪರಿಣಾಮ ಇಲ್ಲಿ ಅನೇಕ ಮನೆಗಳು ಜಲಾವೃತಗೊಂಡಿದ್ದು, ಕೃಷಿ ಭೂಮಿ ಹಾಗೂ ಕೃಷಿ ತೋಟಗಳು ನೀರಿನಿಂದ ಆವೃತವಾಗಿದೆ.
      ಬೈಂದೂರಿನ ಎಡಮಾವಿನಹೊಳೆ ತುಂಬಿ ಹರಿಯುತ್ತಿದ್ದು, ಈ ನದಿ ಭಾಗದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಬೆಳಗ್ಗಿನಿಂದ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಸೌಪರ್ಣಿಕ ನದಿ ತುಂಬಿ ಹರಿಯುತ್ತಿದೆ. ನಾವುಂದ ಸಾಲುºಡ, ಚಿಕ್ಕಳ್ಳಿ, ಪಡಕೋಣೆ, ಬಡಾಕೆರೆ, ಸೇನಾಪುರಗಳಲ್ಲಿ ಮತ್ತೂಮ್ಮೆ ನೆರೆ ಬಂದಿದ್ದು, ಮನೆಯೊಳಗೆ ನೀರು ನುಗ್ಗುವ ಸಾಧ್ಯತೆ ಇದೆ.
      ಅಪಾಯದಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷೆಯ ದೃಷ್ಟಿಯಲ್ಲಿ ಸ್ಥಳಾಂತರಿಸಲಾಗಿದೆ. ಪಶ್ಚಿಮ ಘಟ್ಟ ಪ್ರದೇಶಗಳಾದ ಸಿದ್ದಾಪುರ, ಅಮಾಸೆಬೈಲು, ಹೊಸಂಗಡಿಗಳಲ್ಲಿ ಬೆಳಗ್ಗಿನಿಂದ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com