ಕೋಡಿ ಕಡಲ ತೀರದಲ್ಲಿ ಕಡಲ ಮಡಿ

ಕುಂದಾಪುರ: ಮಂಗಳವಾರ ಕೋಡಿ ಕಡಲ ತೀರಕ್ಕೆ ಅಪಾರ ಪ್ರಮಾಣಕ್ಕೆ ಕಡಲ ಮಡಿ (ಕಡಲ ತ್ಯಾಜ್ಯ) ತೇಲಿ ಬಂದಿದ್ದು, ನೀರು ಕೆಂಬಣ್ಣಕ್ಕೆ ತಿರುಗಿದೆ. 
      ಮೀನುಗಾರರಲ್ಲಿ ಕುಶಿ: ಕಡಲ ಮಡಿ ತೇಲಿ ಬಂದಿರುವುದು ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಹಸಿರು ನಿಶಾನೆಯಾಗಿರುವುದರಿಂದ ಮೀನುಗಾರರಲ್ಲಿ ಹರ್ಷ ಮೂಡಿಸಿದೆ. ಪ್ರತಿ ವರ್ಷವು ಈ ವಿದ್ಯಮಾನ ಘಟಿಸುತ್ತದೆ. 
    ಯಾವಾಗ ಕಡಲು ತನ್ನೊಡಲಿನ ಕಸಕಡ್ಡಿಯನ್ನು ಹೊರಹಾಕುವುದೋ ಸಾಂಪ್ರದಾಯಿಕ ಮೀನುಗಾರರು ಕಡಲಿಗಿಳಿಯುವ ಸನ್ನಾಹ ಮಾಡುತ್ತಾರೆ. ಈ ಬಾರಿಯೂ ಕೋಡಿ ಕಡಲ ತೀರದಲ್ಲಿ ಅಪಾರ ಪ್ರಮಾಣದ ಮಡಿ ತೇಲಿಬಂದಿದೆ. 
      ಪೊರಕೆ ಬಳಕೆ ಸಲ್ಲ: ಕಡಲಿನ ಕಸ ರಾಶಿ ಬಿದ್ದುರುವ ಜಾಗಕ್ಕೆ ಮಡಿ ರಾಶಿ ಎಂದು ಕರೆಯುತ್ತೇವೆ. ಮಡಿರಾಶಿಯನ್ನು ಪೊರಕೆ ಬಳಸಿ ಸ್ವಚ್ಛ ಮಾಡುವಂತಿಲ್ಲ. ಬಳಸಿದರೆ ಮೀನುಗಾರಿಕೆಗೆ ಕುಂದು ಎಂಬ ನಂಬಿಕೆ ಇದೆ ಎಂದು ಸ್ಥಳೀಯ ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com