ರಾಷ್ಟ್ರಮಟ್ಟದಲ್ಲಿ ಬದಲಾವಣೆಯ ಮನ್ಸೂಚನೆ: ಲಾಲಾಜಿ ಮೆಂಡನ್‌

ಕುಂದಾಪುರ: ಲೋಕಸಭಾ ಚುನಾವಣೆ ಸನ್ನಿಹಿತವಾಗುವ ಲಕ್ಷಣಗಳು ಕಂಡು ಬರುವ ಹಿನ್ನಲೆಯಲ್ಲಿ ಪಕ್ಷಕ್ಕೆ ಇನ್ನಿಷ್ಟು ಬಲ ತಂದುಕೊಡಬೇಕಾದ ಅವಶ್ಯಕತೆ ಇದೆ. ರಾಜ್ಯಮಟ್ಟದಲ್ಲಿ ಸ್ಥಾನೀಯ ಸಮಿತಿ, ಜಿಲ್ಲಾ ಸಮಿತಿಗಳನ್ನು ನಡೆಸುವ ಪ್ರಕ್ರಿಯೆಗಳು ನಡೆಯತ್ತಲಿದ್ದು, ಬಿಜೆಪಿ ಮುಂದಿನ ದಿನಗಳಲ್ಲಿ ಭದ್ರ ತಳಪಾಯದ ಮುಂದೆ ಬರಲಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರಮಟ್ಟದಲ್ಲಿ ಬದಲಾವಣೆಯ ಮುನ್ಸೂಚನೆಗಳು ಕಂಡು ಬಂದಿದೆ ಎಂದು ಮಾಜಿ ಶಾಸಕ ಹಾಗೂ ಕುಂದಾಪುರ ಬಿಜೆಪಿ ನೂತನ ಕ್ಷೇತ್ರ ಸಮಿತಿಯ ಚುನಾವಣಾ ಉಸ್ತುವಾರಿ ಲಾಲಾಜಿ ಮೆಂಡನ್‌ ಹೇಳಿದ್ದಾರೆ.
      ಅವರು ಕುಂದಾಪುರದ ಹರಿಪ್ರಸಾದ್‌ ಹೋಟೇಲ್‌ನ ಅಕ್ಷತಾ ಸಭಾಭವನದಲ್ಲಿ ನಡೆದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದರು.
     ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಶಕ್ತಿ ಸಾಮರ್ಥ್ಯ ಎಲ್ಲರೂ ಅರಿತಿದ್ದಾರೆ. ರಾಷ್ಟ್ರಿಯ ನಾಯಕ ಮೋದಿ ನೇತ್ರತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸುವ ಪ್ರಕ್ರಿಯೆಗಳು ನಡೆಯುತ್ತಿದೆ. ಪಕ್ಷಕ್ಕೆ ಇನ್ನಷ್ಟು ಬಲ ತಂದುಕೊಡುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಕೊಂಡಯ್ಯುವಲ್ಲಿ ಶ್ರಮ ವಹಿಸಬೇಕಾಗಿದೆ ಎಂದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com