ಇಳಿಮುಖಗೊಂಡ ಮಳೆ-ತಗ್ಗಿದ ನೆರೆ

ಕುಂದಾಪುರ: ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ ಉತ್ತಮ ಮಳೆಯಾದರೂ ಸಂಜೆ ಹೊತ್ತಿಗೆ ಮಳೆ ಪ್ರಮಾಣದಲ್ಲಿ ಕಡಿಮೆಗೊಂಡಿದೆ. ಇದರಿಂದಾಗಿ ತಗ್ಗು ಪ್ರದೇಶಗಳು, ಕೃಷಿ ಭೂಮಿಗಳು ನೆರೆಯಿಂದ ನಿಧಾನವಾಗಿ ಇಳಿಮುಖಕಂಡಿದೆ.
         ವಾರದಲ್ಲಿ ಎರಡನೇ ಬಾರಿ ನೆರೆಯಿಂದ ತತ್ತರಿಸಿದ್ದ ಸಾಲ್ಬುಡ, ಮರವಂತೆ, ಬಡಾಕೆರೆ, ಪಡುಕೋಣೆ ಪ್ರದೇಶದಲ್ಲಿ ಸೋಮವಾರ ಸಂಜೆ ವೇಳೆಗೆ ನೆರೆ ಇಳಿಮುಖಗೊಂಡಿದೆ. ಬೈಂದೂರಿನ ಸುಮನಾವತಿ ನದಿಯಲ್ಲಿ ಪ್ರವಾಹ ಮಟ್ಟ ಏರಿದ ಪರಿಣಾಮ ಬಿಜೂರಿನ ಪರಿಸರದಲ್ಲಿ ಉಂಟಾಗಿದ್ದ ನೆರೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ.
    ಮುಂಜಾನೆ ಕೊಲ್ಲೂರು, ಜಡ್ಕಲ್‌, ಮುದೂರು, ಬೈಂದೂರು, ಉಪ್ಪುಂದ ಬಿಜೂರು, ನಾವುಂದ, ಬಡಾಕೆರೆ, ನಾಡ, ಸಿದ್ದಾಪುರ, ಹಳ್ಳಿಹೊಳೆ, ಹೊಸಂಗಡಿ, ಮಡಾಮಕ್ಕಿ, ಎಡಮೊಗೆ, ಜಪ್ತಿ, ಮಾರಣಕಟ್ಟೆಯಲ್ಲಿ ಬಿರುಸಿನ ಮಳೆಯಾದರೂ ಸಂಜೆ ವೇಳೆಗೆ ಕಡಿಮೆಯಾಗಿದೆ. ಮಾರಣಕಟ್ಟೆ ದೇವಸ್ಥಾನದ ಪ್ರಾಂಗಣಕ್ಕೆ ಹೊಕ್ಕಿದ ನೆರೆನೀರು ಇಳಿಮುಖಗೊಂಡಿದೆ.

ಹಾನಿ: ಕುಂದಾಪುರ ತಾಲೂಕಿನ ಕಟ್‌ಬೆಲೂ¤ರು ಗ್ರಾಮದ ಚಂದು ಪೂಜಾರಿ ಅವರ ಮನೆಯ ಗೋಡೆ ಕುಸಿದು 25,000 ರೂ. ನಷ್ಟ ಸಂಭವಿಸಿದೆ. ಬಿಜೂರು ಗ್ರಾಮದ ಸುಬ್ರಾಯ ಆಚಾರ್ಯ ಅವರ ವಾಸದ ಮನೆ ಗೋಡೆ ಕುಸಿದು ಹಾನಿ ಸಂಭವಿಸಿದೆ. ನಾಡ ಗ್ರಾಮದ ಸುಶೀಲಾ ಅವರ ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. 98,000 ರೂ. ಹಾನಿ ಸಂಭವಿಸಿದೆ. ಉಡುಪಿ ತಾಲೂಕು ನಾಲ್ಕೂರು ಗ್ರಾಮದ ಗುಣವತಿ ಶೆಡ್ತಿ ಅವರ ಮನೆ ಗೋಡೆ ಕುಸಿದು 20,000 ರೂ., ಕೊಡವೂರು ಸೀತಾ ಅವರ ಮನೆ ಮೇಲೆ ಮರಬಿದ್ದು 20,000 ರೂ., ಕಾವಡಿ ಗ್ರಾಮದ ಪದ್ದಕ್ಕ ಶೆಡ್ತಿ ಅವರ ಮನೆ ಮಾಡು ಬಿದ್ದು 35,000 ರೂ., ಮಟಪಾಡಿ ಗ್ರಾಮದ ಸುಬ್ರಾಯ ನಾಯಕ್‌ ಅವರ ಹಟ್ಟಿ ಬಿದ್ದು 50,000 ರೂ. ನಷ್ಟವಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com