ಜಿಲ್ಲಾ ಮಟ್ಟದ ಗಜವರ್ಣ ಸ್ಪರ್ಧೆ-2013: ಸ್ಪರ್ಧಿಗಳಿಗೆ ಆಹ್ವಾನ

ಕುಂದಾಪುರದ ಸಾಧನ ಸಂಗಮ ಟ್ರಸ್ಟ್ ವತಿಯಿಂದ ನಡೆಯುವ “ಗಜವರ್ಣ” ಎಂಬ ಜಿಲ್ಲಾ ಮಟ್ಟದ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಗಣೇಶ ಚತುರ್ಥಿಯ ಅಂಗವಾಗಿ ಏರ್ಪಡಿಸಲಾಗಿದೆ.  ಸ್ಪರ್ಧೆಯು 5 ವಿಭಾಗಗಳಲ್ಲಿ ನಡೆಯುತ್ತದೆ. ಎಲ್‍ಕೆಜಿ ಯಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಸಾಧನ ಸಂಗಮ ಟ್ರಸ್ಟ್ ಟ್ರಸ್ಟಿ  ಬಿ.ಎನ್.ಸುಧೀಂದ್ರ ತಿಳಿಸಿದರು
    ಅವರು ಕುಂದಾಪುರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ‘ಸಂಸ್ಥೆ ಈಗಾಗಲೇ ನಾಲ್ಕು ವರ್ಷಗಳಿಂದ ತಾಲೂಕು ಮಟ್ಟದಲ್ಲಿ ಗಜವರ್ಣ ಸ್ಫರ್ಧೆ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಐದನೇ ವರ್ಷದ ಆಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿದೆ. ಕುಂದಾಪುರದ  ರೋಟರಿ ಕಲಾ ಮಂದಿರ ಜೂನಿಯರ್ ಕಾಲೇಜ್ ಅವರಣ ಇಲ್ಲಿ  ಸೆಪ್ಟೆಂಬರ್ 1ರಂದು ಪೂರ್ವಾಹ್ನ 09ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ’ ಎಂದರು.
       ಪ್ರತಿ ವಿಭಾಗದಲ್ಲಿ 3 ಬಹುಮಾನ ಇಡಲಾಗಿದೆ. ಸ್ಪರ್ಧೆಯು ಎಲ್‍ಕೆಜಿ, ಯುಕೆಜಿ, 1ನೇ ತರಗತಿ, 2, 3,  4ನೇ ತರಗತಿ, 5, 6, 7ನೇ ತರಗತಿ, 8, 9, 10ನೇ ತರಗತಿ ಹಾಗೂ ಮುಕ್ತ ವಿಭಾಗಗಳಲ್ಲಿ ನಡೆಯಲಿದೆ. ಸ್ಪರ್ಧಾಳುಗಳು ಡ್ರಾಯಿಂಗ್ ಹಾಳೆ ಹೊರತುಪಡಿಸಿ ಉಳಿದೆಲ್ಲಾ ಪರಿಕರಗಳನ್ನು ತಾವೇ ತರತಕ್ಕದ್ದು. ವರ್ಣಮಯ ಚಿತ್ರಗಳಿಗೆ ಮಾತ್ರ ಅವಕಾಶ(Crayons, Oil pastels, Watercolor, Acrylic), ಎಲ್ಲಾ ವಿಭಾಗಕ್ಕೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುತ್ತದೆ. ಇದಲ್ಲದೇ ಪ್ರತಿ ವಿಭಾಗದಲ್ಲಿ 3 ಸಮಾಧಾನಕರ ಬಹುಮಾನವಿರುತ್ತದೆ. ಅತೀ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ ಸರಕಾರಿ, ಖಾಸಗಿ ಶಾಲೆಗೆ ಪ್ರತ್ಯೇಕ ವಿಶೇಷ ಪುರಸ್ಕಾರ.ಮುಕ್ತ ವಿಭಾಗದಲ್ಲಿ ಸ್ಪರ್ಧಿಸುವವರು ಉಡುಪಿ ಜಿಲ್ಲೆಯ ನಿವಾಸಿಗಳಾಗಿರಬೇಕು, ಗುರುತಿನ ಚೀಟಿ ಕಡ್ಡಾಯ ತರಬೇಕು’ ಎಂದರು.
ಸಂಸ್ಥೆಯ ಮೆನೇಜಿಂಗ್ ಟ್ರಸ್ಟಿ ನಾರಾಯಣ ಐತಾಳ್ ಮಾತನಾಡಿ, ಹಿಂದೆ ತಾಲೂಕು ಮಟ್ಟದಲ್ಲಿ ಸ್ಫರ್ಧೆ ಮಾಡಿದಾಗ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತ್ತು. 200ರಿಂದ ಮೇಲ್ಪಟ್ಟು ಸ್ಪರ್ಧಿಗಳು ಭಾಗವಹಿಸಿದ್ದರು.ಈ ಬಾರಿ 400ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿ ವಿಭಾಗಗಳಲ್ಲಿ ಪ್ರಥಮ ಬಹುಮಾನ ರೂ.1500 ಮತ್ತು ಪ್ರಮಾಣ ಪತ್ರ,   ದ್ವಿತೀಯ ಬಹುಮಾನ ರೂ.1200 ಮತ್ತು ಪ್ರಮಾಣ ಪತ್ರ,   ತೃತೀಯ ಬಹುಮಾನ ರೂ. 800 ಮತ್ತು ಪ್ರಮಾಣ ಪತ್ರ ,ಪ್ರತಿ ವಿಭಾಗದಲ್ಲಿ 3 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.ಅತೀ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ ಸರಕಾರಿ, ಖಾಸಗಿ ಶಾಲೆಗೆ ಪ್ರತ್ಯೇಕ ವಿಶೇಷ ಪುರಸ್ಕಾರ ನೀಡಲಾಗುವುದು. ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳು ಅಥವಾ ಶಾಲೆಯವರು  ಸಂಸ್ಥೆ ಹಾಗೂ ದೂರವಾಣಿ ಸಂಖ್ಯೆ 08254 234950, 9448121950, 8722739038 ಸಂಪರ್ಕಿಸಬಹುದು’ ಎಂದರು.  
ಕಲಾವಿದ ಮಂಜುನಾಥ ಮಯ್ಯರು ಕಳೆದ ವರ್ಷ ಚೌತಿಯಿಂದ ಗಣೇಶನ ದಿನಕ್ಕೊಂದು ಚಿತ್ರ ಬಿಡಿಸುವ ಸಂಕಲ್ಪ ಮಾಡಿದ್ದು ಈ ಬಾರಿ ಅದರ ಪ್ರದರ್ಶನ ಕೂಡಾ ನಡೆಯಲಿದೆ. ಜಲವರ್ಣ, ರೇಖೆಗಳಲ್ಲಿ ಗಣಪತಿಯ ವಿವಿಧ ಭಂಗಿಗಳನ್ನು ಬಿಡಿಸಿದ್ದಾರೆ. ಅಲ್ಲದೇ ಸಾಧನ ಸಂಗಮ ಕುಂದಾಪುರದ ಒಂದು ಶಾಶ್ವತ ಆರ್ಟ್ ಗ್ಯಾಲರಿ’ ಎಂದರು. ಈ ಸಂದರ್ಭದಲ್ಲಿ ಕಲಾವಿದ ಮಂಜುನಾಥ ಮಯ್ಯ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com