ವಿವಿಧೆಡೆ ಬಿಲ್ವ ಆಂದೋಲನ

 ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ಬಿಲ್ವ ಆಂದೋಲನಕುಂದಾಪುರ: ಸಹಜವಾಗಿ ಮಾನವನಲ್ಲಿ ಹಾಸುಹೊಕ್ಕಾಗಿದ್ದ ಪರಿಸರ ಕಾಳಜಿ ಕ್ರಮೇಣ ಕ್ಷೀಣಿಸುತ್ತಾ ಹೋಗಿ ಇದೀಗ ನಿರಂತರ ಪ್ರಕೃತಿಯ ಮೇಲೆ ದೌರ್ಜನ್ಯವೆಸಗುವಂತಾಗಿದೆ. ಪ್ರಕೃತಿ ಮುನಿಸಿಕೊಂಡು ಉತ್ತರ ನೀಡುವ ಮೊದಲು ನಾವೆಲ್ಲರೂ ಪರಿಸರ ಕಾಳಜಿಯನ್ನು ಬೆಳೆಸಿಕೊಂಡು ಪ್ರಕೃತಿಯನ್ನು ಸಮೃದ್ಧಗೊಳಿಸೋಣ ಎಂದು ಕುಂದಾಪುರದ ಫ್ಲೋರಾ ಎಂಡ್ ಫೌನ ಕ್ಲಬ್‍ನ ಅಧ್ಯಕ್ಷ ಡಾ.ಎಚ್.ಎಸ್.ಮಲ್ಲಿ ಹೇಳಿದರು.
ಅವರು ಅ.12ರಂದು ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಬಿಲ್ವವೃಕ್ಷ ಆಂದೋಲನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರೀ ಕುಂದೇಶ್ವರ ದೇವಳದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ವಿ.ಆರ್.ಕೆ.ಹೊಳ್ಳ ಹಾಗೂ ಡಾ.ಎಚ್.ಮಲ್ಲಿಯವರು ಜಂಟಿಯಾಗಿ ಕುಂದೇಶ್ವರ ಕೆರೆಯ ಭಾಗದಲ್ಲಿ ಬಿಲ್ವ ಸಸಿಗಳನ್ನು ನೆಟ್ಟು ಚಾಲನೆ ನೀಡಿದರು.
ಬಿಲ್ವವೃಕ್ಷ ಆಂದೋಲನದ ಸಂಚಾಲಕ ಎನ್. ಮೋಹನ್ ಆಚಾರ್ಯ, ಹಸಿರು ಭಾರತ ಆಂದೋಲನದ ವಿಶ್ವಸ್ಥ ಡಾ.ಉತ್ತಮ್‍ಕುಮಾರ್ ಶೆಟ್ಟಿ, ಸಂತೋಷ ಕೋಣಿ, ಕುಂದೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೋಭಾ ಮಧ್ಯಸ್ಥ, ಗಂಗಾಧರ ಶೆಟ್ಟಿ, ರಾಘವೇಂದ್ರ ಚರಣ ನಾವಡ, ಕೃಷ್ಣಮೂರ್ತಿ, ಗೋಪಾಲ ಪೂಜಾರಿ ವಡೇರಹೋಬಳಿ ಇನ್ನಿತರರು ಉಪಸ್ಥಿತರಿದ್ದರು.
***
ಶ್ರೀ ಕೋಟಿಲಿಂಗೇಶ್ವರನ ಸನ್ನಿಧಿಯಲ್ಲಿ ಬಿಲ್ವ ಸಸಿ ವಿತರಣೆಕೋಟೇಶ್ವರ : ಬಿಲ್ವದ ಎಲೆಯನ್ನು ಪ್ರತಿನಿತ್ಯ ಸೇವಿಸಿರೆ ಮಧುಮೇಹ ಕಾಯಿಲೆಯಿಂದ ದೂರ ಉಳಿಯುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಎಲೆಯಿಂದ ಬೇರಿನವರೆಗಿನ ಎಲ್ಲ ಭಾಗಗಳು ವಿಶೇಷ ಮಹತ್ವವನ್ನು ಪಡೆದಿದ್ದು, ತ್ರಿದಳವನ್ನೊಳಗೊಂಡ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವುದರಿಂದ ದೇವರ ಕೃಪೆಗೆ ಪಾತ್ರರಾಗಬಹುದೆಂಬ ನಂಬಿಕೆ ಇಂದಿಗೂ ಜೀವಂತವಾಗಿದೆ. ಇಂತಹ ಮಹತ್ವವುಳ್ಳ ಬಿಲ್ವ ವೃಕ್ಷ ಸಂತತಿಯನ್ನು ವೃದ್ಧಿಸುವ ಕಾರ್ಯದಲ್ಲಿ ಕೈ ಜೋಡಿಸಿ ಎಂದು ಬಿಲ್ವವೃಕ್ಷ ಆಂದೋಲನ ಸಂಚಾಲಕ ಎನ್. ಮೋಹನ ಆಚಾರ್ಯ ಕೋಟೇಶ್ವರ ವಿನಂತಿಸಿದರು. 
      ಅವರು ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಬಿಲ್ವ ವೃಕ್ಷ ಆಂದೋಲನದ ಅಂಗವಾಗಿ ಹಮ್ಮಿಕೊಂಡ ಬಿಲ್ವವೃಕ್ಷ ಮಹತ್ವ ಹಾಗೂ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 
       ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಗುರುರಾಜ್ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಕೆ.ವಿ.ಕೆ ಐತಾಳ್, ಕೋಟೇಶ್ವರ ಗ್ರಾ.ಪಂ.ಸದಸ್ಯ ಸುಕೇಶ್ ಶೇಟ್, ಹಸಿರು ಭಾರತ ಆಂದೋಲನ ವಿಶ್ವಸ್ಥ ಸಂತೋಷ ಕೋಣಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಅತಿಥಿ ಉಪಪನ್ಯಾಸಕರ ಸಂಘದ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

***
ಶಿವಾವಲಯದಲ್ಲಿ ಬಿಲ್ವ ಆಂದೋಲನ


ಕುಂದಾಪುರ: ತಾಲೂಕಿನ ಕೋಡಿಯ ಶಿವಾಲಯದಲ್ಲಿ ಇತ್ತೀಚೆಗೆ ಬಿಲ್ವವೃಕ್ಷ ಆಂದೋಲನದ ಅಂಗವಾಗಿ ಬಿಲ್ವ ಸಸಿಗಳನ್ನು ನೆಡಲಾಯಿತು.
ದೇವಳದ ಅರ್ಚಕ ಕೃಷ್ಣಮೂರ್ತಿ ಐತಾಳ್ ಬಿಲ್ವ ಸಸಿಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಬಿಲ್ವವೃಕ್ಷ ಆಂದೋಲನದ ಸಂಚಾಲಕ ಎನ್.ಮೋಹನ ಆಚಾರ್ಯ ಕೋಟೇಶ್ವರ, ಹಸಿರು ಭಾರತ ಆಂದೋಲನದ ವಿಶ್ವಸ್ಥ ಸಂತೋಷ ಕೋಣಿ, ನಾರಾಯಣ ಮಡಿವಾಳ ರಾಘವೇಂದ್ರ ಎಂ., ಇನ್ನಿತರರು ಉಪಸ್ಥಿತರಿದ್ದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com