ಕುಂದಾಪುರ: ನಮ್ಮ ಬಹುತೇಕ ಬೇಡಿಕೆಯನ್ನು ಪ್ರಕೃತಿಯಿಂದ ಪೂರೈಸಿಕೊಳ್ಳುತ್ತೇವೆ ಆದರೆ ಮರಳಿ ಪ್ರಕೃತಿಗೆ ನಾವೇನು ನೀಡುತ್ತಿಲ್ಲ. ನಮ್ಮ ನೆಮ್ಮದಿಯ ಬದುಕಿಗೆ ಪ್ರಕೃತಿ ಪೂರಕವಾಗಿದೆ ಆದುದರಿಂದ ಪರಿಸರದ ಸಮತೋಲನ ಕಾಯ್ದುಕೊಳ್ಳುವ ಅಗತ್ಯತೆಯ ಹಿನ್ನಲೆಯಲ್ಲಿ ಪ್ರಕೃತಿಯ ಸಮೃದ್ಧತೆಗೆ ಅಳಿಲು ಸೇವೆ ಸಲ್ಲಿಸ ಬೇಕಾದ ಅಗತ್ಯತೆ ಇದೆ ಎಂದು ಹಸಿರು ಭಾರತ ಆಂದೋಲನದ ವಿಶ್ವಸ್ಥ ಡಾ.ಉತ್ತಮ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಇತ್ತೀಚೆಗೆ ಹಂಗಳೂರಿನ ಶ್ರೀ ಶನೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡ ಬಿಲ್ವವೃಕ್ಷ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ಶನೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅಣ್ಣಯ್ಯ ಪೂಜಾರಿಯವರು ದೇವಳದ ಆರವಣದಲ್ಲಿ ಬಿಲ್ವಸಸಿಯನ್ನು ನೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಿಲ್ವವೃಕ್ಷ ಆಂದೋಲನದ ಸಂಚಾಲಕ ಎನ್.ಮೋಹನ ಆಚಾರ್ಯ ಜೀವ ವಿಮಾ ನಿಗಮದ ಉದ್ಯೋಗಿ ರಾಮಚಂದ್ರ ಭಟ್, ನಾಟಕ ನಿದೇರ್ಶಕ ಮನೋಹರ ಪೈ, ಹಸಿರು ಭಾರತ ಆಂದೋಲನದ ವಿಶ್ವಸ್ಥ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.
0 comments:
Post a Comment