ಗೋಪಾಡಿಯಲ್ಲಿ ಬಿಲ್ವ ವೃಕ್ಷ ಆಂದೋಲನ

ಕುಂದಾಪುರ: ಯುವಕ ಮಂಡಲ (ರಿ) ಗೋಪಾಡಿ ಹಾಗೂ ಸಹನ ಯುವತಿ ಮಂಡಲ (ರಿ) ಗೋಪಾಡಿ ಆಶ್ರಯದಲ್ಲಿ ಇತ್ತೀಚೆಗೆ ಬಿಲ್ವ ವೃಕ್ಷ ಆಂದೋಲನದ ಅಂಗವಾಗಿ ಗೋಪಾಡಿ ಶ್ರೀ ಕಾಂತೇಶ್ವರ ದೇವಳದ ವಠಾರದಲ್ಲಿ ಬಿಲ್ವ ಸಸಿಯನ್ನು ನೆಡೆಲಾಯಿತು. 
ಯುವಕ ಮಂಡಲದ ಪ್ರಮುಖರಾದ ಗಣೇಶ ಭಟ್ ಹಾಗೂ ಸುಧಾ ಭಟ್ ದಂಪತಿಗಳು ಬಿಲ್ವ ಸಸಿಯನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ಬಿಲ್ವ ವೃಕ್ಷ ಆಂದೋಲನದ ಸಂಚಾಲಕ ಎನ್. ಮೋಹನ್ ಆಚಾರ್ಯ ಕೋಟೇಶ್ವರ ಮಾತನಾಡಿ ಕಣ್ಮರೆಯಾಗುತ್ತಿರುವ ಬಿಲ್ವ ಸಸಿಯನ್ನು ನೆಟ್ಟು ಬೆಳೆಸುವುದರಿಂದ ಪ್ರಕೃತಿಗೆ ಬಹು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ಬಿಲ್ವ ಸಸಿಗಳನ್ನು ವಿತರಿಸಿದರು. 
ಹಸಿರು ಭಾರತ ಆಂದೋಲನ ವಿಶ್ವಸ್ಥ ಸಂತೋಷ ಕೋಣಿ, ಸಹನ ಯುವತಿ ಮಂಡಲದ ಅಧ್ಯಕ್ಷೆ ಸುಜಾತ ಆಚಾರ್ಯ ಇನ್ನಿತರು ಉಪಸ್ಥಿರಿದ್ದರು. ರೋಟರಿ ಕ್ಲಬ್ ಕುಂದಾಪುರದ ಕಜಾಂಚಿ ವೆಂಕಟೇಶ್ ನಾವುಂದ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com