ಕೋಟೆ ಆಂಜನೇಯ ದೇವಸ್ಥಾನ ಪುನರ್‌ ನಿರ್ಮಾಣಕ್ಕೆ ನಿರ್ಧಾರ

ಕುಂದಾಪುರ: ನಗರದ ಪ್ರಥಮ ದೇವಸ್ಥಾನ ಎಂದು ದಾಖಲಿಸಲ್ಪಟ್ಟಿರುವ ಕೋಟೆ ಆಂಜನೇಯ ದೇವಸ್ಥಾನವನ್ನು ಭವ್ಯವಾಗಿ ಪುನರ್‌ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.
    ಸುಮಾರು 850 ವರ್ಷದ ಇತಿಹಾಸ ಹೊಂದಿರುವ ಈ ದೇಗುಲ ಸ್ಥಳೀಯ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟಿದ್ದು, ಪಂಚಗಂಗಾವಳಿ ತೀರದಲ್ಲಿದೆ.
   ದೇವಸ್ಥಾನದ ಮೊಕ್ತೇಸರರಾದ ಕೋಡಿ ಶ್ರೀನಿವಾಸ ಶೆಣೈ, ಮಾಳಪ್ಪ ಪೈ, ಶ್ರೀನಿವಾಸ ಪ್ರಭು ಸಭೆಯಲ್ಲಿ ಉಪಸ್ಥಿತರಿದ್ದರು.
ದೇವಾಲಯದ ಪುನರ್‌ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ಶ್ರೀ ಹರಿಗುರು ಸೇವಾ ಪ್ರತಿಷ್ಠಾನದ ಶ್ರೀನಿವಾಸ ಪ್ರಭು ತಜ್ಞರ ಸಹಕಾರದಿಂದ ರಚಿಸಿರುವ ನಿರ್ಮಾಣಗೊಳ್ಳಲಿರುವ ದೇವಾಲಯದ ನಕ್ಷೆ, ರೂಪುರೇಖೆಯನ್ನು ಪ್ರದರ್ಶಿಸಲಾಯಿತು.

ಅ. 19ರಂದು ಮೂಹೂರ್ತ
       ಶ್ರೀ ಕಾಶಿಮಠಾಧೀಶ ಸುಧೀಂದ್ರತೀರ್ಥ ಸ್ವಾಮೀಜಿ ಹಾಗೂ ಅವರ ಪಟ್ಟಶಿಷ್ಯ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಸಮಾಜದ ಸಕಲ ಗುರುಗಳ ಆಶೀರ್ವಚನ ಪಡೆದು ನಿರ್ಮಾಣ ಕಾರ್ಯಕ್ಕೆ ಒಪ್ಪಿಗೆ ಪಡೆಯಲಾಗಿದ್ದು ಅ. 19ರಂದು ಮೂಹೂರ್ತ ನಡೆಯಲಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com