ಗ್ರಾ. ಪಂ: 5 ಸ್ಥಾನಗಳಿಗೆ ಮರುಚುನಾವಣೆ

ಕುಂದಾಪುರ:  ಕುಂದಾಪುರ ತಾಲೂಕಿನ 16 ಗ್ರಾಮ ಪಂಚಾಯಿತಿಗಳ 18 ಕ್ಷೇತ್ರಗಳಿಗೆ ಮರುಚುನಾವಣೆಗೆ ಸಂಬಂಧಿಸಿ ನಾಮಪತ್ರ ಹಿಂತೆಗೆದುಕೊಳ್ಳುವಿಕೆ ಜು.27ಕ್ಕೆ ಅಂತ್ಯಗೊಂಡಿದ್ದು, ಬದಲಾದ ರಾಜಕೀಯ ವಿದ್ಯಾಮಾನಗಳಲ್ಲಿ ಕೇವಲ ಐದು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.
ಗಂಗೊಳ್ಳಿಯಲ್ಲಿ ಚುನಾವಣೆಗೆ ಸಲ್ಲಿಸಲಾಗಿದ್ದ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಅಭ್ಯರ್ಥಿಗಳೆಲ್ಲರೂ ಚುನಾವಣೆ ತಡೆದಿದ್ದರೆ, ಉಳಿದ 12 ಸ್ಥಾನಗಳಲ್ಲಿ ಒಬ್ಬೊಬ್ಬ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಅವಿರೋಧ ಆಯ್ಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದ್ದ ಜು.24ರಂದು ತಾಲೂಕಿನ 18 ಕ್ಷೇತ್ರಗಳಲ್ಲಿ ಅನುಸೂಚಿತ ಜಾತಿ ಮಹಿಳೆಗೆ 1, ಹಿಂದುಳಿದ ವರ್ಗ ಅ ಮಹಿಳೆಗೆ 2, ಹಿಂದುಳಿದ ಬ ವರ್ಗ ಮಹಿಳೆಗೆ 2 ಹಾಗೂ ಸಾಮಾನ್ಯ 32 ಮತ್ತು ಸಾಮಾನ್ಯ ಮಹಿಳೆ ಸ್ಥಾನಕ್ಕೆ 19 ನಾಮಪತ್ರಗಳು ಸೇರಿದಂತೆ ಒಟ್ಟು ಐವತ್ತೊಂದು ನಾಮಪತ್ರಗಳು ಸ್ವೀಕೃತವಾಗಿವೆ. ಜಡ್ಕಲ್, ಹೇರೂರಿನ ಉಳ್ಳೂರು 1, ಹಕ್ಲಾಡಿಯ ನೂಜಾಡಿ, ಹೆಮ್ಮಾಡಿಯ ದೇವಲ್ಕುಂದ, ಕೆದೂರಿನ ಉಳ್ತೂರು, ಯೆಡ್ತೆರೆ ಗ್ರಾಮ ಪಂಚಾಯಿತಿಯ ಯೆಡ್ತೆರೆ ಕ್ಷೇತ್ರಗಳಲ್ಲಿ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದು ಅವಿರೋಧ ಆಯ್ಕೆ ನಡೆಯುವ ನಿರೀಕ್ಷೆ ಇತ್ತು. ಜು.27ರಂದು ನಾಮಪತ್ರ ಅಂತಿಮಗೊಂಡಿದ್ದು, ಉಪ್ಪುಂದ ಮೂರನೇ ಕ್ಷೇತ್ರ, ನಾಡಾ ಒಂದನೇ ಕ್ಷೇತ್ರ, ಹೆಮ್ಮಾಡಿ ಮೂರನೇ ಕ್ಷೇತ್ರ, ಬಿಜೂರು 1ನೇ ಕ್ಷೇತ್ರ ಹಾಗೂ ಹಟ್ಟಿಯಂಗಡಿಯ ಒಂದನೇ ಕ್ಷೇತ್ರದಲ್ಲಿ ಚುನಾವಣೆಗಳು ನಡೆಯಲಿವೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com