ಮರವಂತೆ ಗ್ರಾ.ಪಂ.ಗೆ ಭೇಟಿ ನೀಡಿದ ಕೆನಡಾ ಕಾನೂನು ವಿದ್ಯಾರ್ಥಿಗಳು

ಕುಂದಾಪುರ: ಕೆನಡಾದ ಟೊರಂಟೋದ ಒಸ್ ಗ್ರೇಡ್ ಸ್ಕೂಲ್‌ನಲ್ಲಿ ಕಾನೂನು ಅಧ್ಯಯನ ನಡೆಸುತ್ತಿರುವ ಅಲಿ ಎಸ್ನಾ ಶಾನ್ ಮತ್ತು ಫಾತಿಮಾ ಜಿವಾಜಿ ಶುಕ್ರವಾರ ಮರವಂತೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು.
ತಮ್ಮ ಅಧ್ಯಯನದ ಭಾಗವಾಗಿ ಕನ್ಯಾನದ ಕನ್ಸರ್ನ್‌ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ಸ್ ಸಂಸ್ಥೆಯಲ್ಲಿ ಮಕ್ಕಳ ದೂರುಗಳ ವಿಲೇವಾರಿ ಕುರಿತು ಪ್ರಾಯೋಗಿಕ ಕಲಿಕೆಗಾಗಿ ಬಂದಿರುವ ಅವರು ಮರವಂತೆ ಗ್ರಾ.ಪಂ ಈ ನಿಟ್ಟಿನಲ್ಲಿ ಅನುಸರಿಸುತ್ತಿರುವ ಕ್ರಮಗಳ ಕುರಿತು ಅಧ್ಯಕ್ಷೆ ಕೆ. ಎ. ಸುಗುಣಾ ಮತ್ತು ಸದಸ್ಯರ ಜತೆ ಚರ್ಚೆ ನಡೆಸಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿ ಮಕ್ಕಳ ಶಿಕ್ಷಣ, ಅವರ ಹಕ್ಕುಗಳ ರಕ್ಷಣೆ, ಬಾಲಕಾರ್ಮಿಕ ಪದ್ಧತಿ ಮತ್ತು ಅದರ ವಿರುದ್ಧ ಕ್ರಮ, ಮಕ್ಕಳಿಗೆ ಇರುವ ಪಾಲ್ಗೊಳ್ಳುವ ಅವಕಾಶಗಳು ಕುರಿತು ಮಾಜಿ ಅಧ್ಯಕ್ಷ ಎಸ್. ಜನಾರ್ದನಗೆ ವಿಸ್ತೃತ ಮಾಹಿತಿ ನೀಡಿದರು.  ಮಕ್ಕಳ ಸಾಗಾಟ ತಡೆ ಸಮಿತಿಯ ಚಟುವಟಿಕೆಗಳನ್ನು ವಿವರಿಸಿದರು. ಶಿಕ್ಷಣ, ಶಿಶು ಕಲ್ಯಾಣ ಮತ್ತು ಆರೋಗ್ಯ ಇಲಾಖೆಗಳ ಮೂಲಕ ಮಕ್ಕಳು ಪಡೆಯುತ್ತಿರುವ ಸೌಲಭ್ಯಗಳ ವಿವರ ನೀಡಿದರು.
ಗ್ರಾ.ಪಂ. ಸದಸ್ಯರಾದ ಶ್ರೀಮತಿ ಆಚಾರ್ಯ, ಅನಿತಾ, ನರಸಿಂಹ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ, ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಕೆ. ನಾಗರಾಜ ಕಾರಂತ, ಸಿಡಬ್ಲ್ಯೂಸಿಯ ವೆಂಕಟೇಶ್, ಶಾರದಾ ಚರ್ಚೆಯಲ್ಲಿ ಭಾಗವಹಿಸಿದರು.
ಭಾರತ್ ನಿರ್ಮಾಣ ತಾಲೂಕು ಸಂಯೋಜಕಿ ಆಶಾಲತಾ ಮರವಂತೆ, ಅಂಗನವಾಡಿ ಕಾರ್ಯಕರ್ತೆ ಸರೋಜಾ ಶ್ಯಾನುಭಾಗ್, ಸಾವಿತ್ರಿ ಗಾಣಿಗ ಮತ್ತು ಭಾರತ್ ನಿರ್ಮಾಣ ಸ್ವಯಂಸೇವಕರು ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com