ಬೈಂದೂರು: ಕಾರ್ಪೋರೇಶನ್ ಬ್ಯಾಂಕ್ ಮತ್ತು ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ (ನಿ), ಮಂಗಳೂರು ಇವುಗಳ ಸಹಯೋಗದಲ್ಲಿ ಮಹಿಳಾ ಮೀನುಗಾರರಿಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ವಿತರಣೆ ಕಾರ್ಯಕ್ರಮವನ್ನು ಅ.17 ರಂದು ಮಧ್ಯಾಹ್ನ 3ಕ್ಕೆ ನಾಗೂರಿನ ಶ್ರೀ ಕೃಷ್ಣ ಲಲಿತ ಕಲಾ ಮಂದಿರದಲ್ಲಿ ಜರಗಲಿದೆ.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರು ಉದ್ಘಾಟಿಸಲಿದ್ದಾರೆ. ಸಾಲದ ಚೆಕ್ ವಿತರಣೆಯನ್ನು ಮೀನುಗಾರಿಕೆ ಹಾಗೂ ಯುವಜನ ಸೇವೆ ಸಚಿವ ಕೆ. ಅಭಯಚಂದ್ರ ಜೈನ್ ಮಾಡುವರು. ಅಧ್ಯಕ್ಷತೆಯನ್ನು ಬೈಂದೂರು ಶಾಸಕರಾದ ಕೆ.ಗೋಪಾಲ ಪೂಜಾರಿ ವಹಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ.ಶಂಕರ್, ಮಂಗಳೂರು ಕಾರ್ಪೊàರೇಶನ್ ಬ್ಯಾಂಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಬಿ.ಕೆ ಶ್ರೀವಾತ್ಸವ್, ಕರಾವಳಿ ಮೀನುಗಾರಿಕಾ ಜಂಟಿ ನಿರ್ದೇಶಕ ಗಂಗಾಧರ ವಿ. ಮಡ್ಡಿಕೇರಿ, ಜಿ.ಪಂ.ಸದಸ್ಯ ಬಾಬು ಹೆಗ್ಡೆ, ಉಡುಪಿ ಜಿಲ್ಲೆಯ ಮೊಗವೀರ ಯುವಸಂಘಟನೆಯ ಅಧ್ಯಕ್ಷ ಜಯ.ಸಿ.ಕೋಟ್ಯಾನ್, ಮಂಗಳೂರು ಮೀನುಗಾರಿಕಾ ಉಪನಿರ್ದೇಶಕ ಸುರೇಶ್ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.
0 comments:
Post a Comment