ಹಿರಿಯರ ತ್ಯಾಗ-ಬಲಿದಾನ ಸ್ಮರಣೀಯ: ಎಸ್.ಯೋಗೇಶ್ವರ

ಕುಂದಾಪುರ: ಕುಂದಾಪುರ: ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರ ಮಾಡಿರುವ ತ್ಯಾಗ ಹಾಗೂ ಬಲಿದಾನಗಳು ಇಂದಿನ ಯುವ ಜನತೆಗೆ ಸ್ಮರಣೀಯವಾಗಬೇಕು. ದೇಶದ ಮುಂದಿನ ಪ್ರಗತಿಗಾಗಿ ನಾವು ಹಿಂದೆ ಸಾಗಿ ಬಂದಿರುವ ದಾರಿಗಳ ಬಗ್ಗೆ ಅವಲೋಕನ ನಡೆಸಬೇಕು. ದೇಶದ ಹಿತ ಸರ್ವರ ಹಿತ ಎನ್ನುವ ಭಾವನೆಯಲ್ಲಿ ಮುನ್ನಡೆದಾಗ ಹಾಗೂ `ಸರ್ವರಿಗೂ ಸಮ ಬಾಳು ಹಾಗೂ ಸಮ ಪಾಲು' ಎನ್ನುವ ನಿರ್ಧಾರಗಳಿಂದ ದೇಶ ಪ್ರಗತಿಯ ಗುರಿ ಮುಟ್ಟಲು ಸಾಧ್ಯ ಎಂದು ಕುಂದಾಪುರದ ಕಂದಾಯ ಉಪ ವಿಭಾಗಾಧಿಕಾರಿ ಎಸ್.ಯೋಗೇಶ್ವರ ಹೇಳಿದರು. 
   ಕುಂದಾಪುರದ ಗಾಂಧಿ ಮೈದಾನ ದಲ್ಲಿ ಸ್ವಾತಂತ್ರ್ಯೋತ್ಸವ ಸಮಿತಿಯಿಂದ ನಡೆದ 67 ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ  ಅವರು ಮಾತನಾಡಿದರು.
      ರಾಷ್ಟ್ರಪಿತ ಗಾಂಧೀಜಿ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರು ಬ್ರೀಟಿಷರ ದಾಸ್ಯ ಮುಕ್ತಿಗಾಗಿ ಮಾಡಿದ ಅರ್ಪಣ ಮನೋಭಾವದ ಹೋರಾಟ ಹಾಗೂ ತ್ಯಾಗಗಳು ನಮಗೆ ಸ್ಪೂರ್ತಿ ಯಾಗ ಬೇಕು. ನಮ್ಮ ಹಿರಿಯರು ಕಂಡ ಭವ್ಯ ರಾಷ್ಟ್ರದ ಕನಸು ಇನ್ನೂ ನನ ಸಾಗಿಲ್ಲ. ಈ ಗುರಿಯನ್ನು ತಲುಪಲು ರಾಷ್ಟ್ರ ವಾಸಿಗಳಾದ ನಾವೆಲ್ಲ ದೀಕ್ಷೆ ತೊಡಬೇಕು. ನಮ್ಮ ಯುವಜನತೆ ಈ ಹೊಣೆಯನ್ನು ಹೊರಬೇಕು ಎಂದು ಹೇಳಿದ ಅವರು ನಮ್ಮ ದೇಶದ ರಕ್ಷಣೆಯ ಜೊತೆಯಲ್ಲಿ ಹುತಾತ್ಮರಾಗಿ ತ್ಯಾಗವನ್ನು ತೋರು ತ್ತಿರುವ ಯೋಧರ ಹಾಗೂ ಸಾಧಕರ ಕಾರ್ಯಗಳು ದೇಶದ ಪ್ರಗತಿಯ ಹಾದಿಯಲ್ಲಿ ದಾರಿ ದೀಪವಾಗಬೇಕು ಎಂದು ನುಡಿದರು.
     ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಶೆಟ್ಟಿ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಕೆ. ಗೋಪಾಲ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಟಿ ಶ್ರೀಯಾನ್, ಡಿವೈಎಸ್‌ಪಿ ಯ ಶೋಧಾ ಎಸ್ ಒಂಟಗೋಡಿ, ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ ಕವರಿ ಇತರರು ಸಮಾರಂಭದಲ್ಲಿ ಇದ್ದರು.
   ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಎಸ್.ಐ ಇಮ್ರೋನ್ ಅವರ ನೇತ್ರತ್ವದಲ್ಲಿ ಪೊಲೀಸ್, ಗೃಹ ರಕ್ಷಕ ದಳ, ಭಾರತ್ ಸೇವಾದಳ, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಮುಂತಾದ ತಂಡಗಳಿಂದ ಆಕರ್ಷಕ ಪಥಸಂಚಲನಾ ನಡೆಯಿತು. ವಿವಿಧ ಶಾಲೆಯ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
     ಕುಂದಾಪುರದ ತಹಸೀಲ್ದಾರ್ ಗಾಯತ್ರಿ ನಾಯಕ್ ಸ್ವಾಗತಿಸಿದರು, ಚಂದ್ರಶೇಖರ ಬೀಜಾಡಿ ನಿರೂಪಿಸಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com