ದಾಸ್ತಾನು ಕೊಠಡಿ ಉಧ್ಘಾಟನೆ, ಸನ್ಮಾನ

ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಳೂರು ಶಾಲೆಯ ದಾಸ್ತಾನು ಕೋಣೆ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಉಡುಪಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್ ದಾಸ್ತಾನು ಕೋಣೆ ಉಧ್ಘಾಟಿಸಿದರು.
ಶಾಲೆಗೆ ಲ್ಯಾಪ್‍ಟ್ಯಾಪ್ ನೀಡಿದ ಶಂಕರ್ ಶೆಟ್ಟಿ, ನಳ್ಳಿ ನೀರಿನ ಕಟ್ಟೆ ಕಟ್ಟಸಿಕೊಟ್ಟ   ಸುಬ್ರಹ್ಮಣ್ಯ ಬಾಯರಿ,  ತರಗತಿ ಕೋಣೆಗೆ ಟೈಲ್ಸ್ ಅಳಡಿಸಿಕೊಟ್ಟ ಶ್ರೀನಿವಾಸ ಬಾಯರಿ, ದಾಸ್ತಾನು ಕೊಠಡಿ ನೀಡಿದ ಭೋಜರಾಜ್ ಶೆಟ್ಟಿ ಅವರನ್ನು ಕ್ರಮವಾಗಿ ಗಣಪತಿ ಶ್ರೀಯಾನ್, ಗ್ರಾ.ಪಂ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ನಿವೃತ್ತ ಗ್ರಾಮ ಲೆಕ್ಕಿಗ  ಮಂಜುನಾಥಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಆನಂದ ಶೆಟ್ಟಿ ಸನ್ಮಾನಿಸಿದರು.
 ಶಾಲೆಗೆ 30 ಫೈಬರ್ ಕುರ್ಚಿ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಒಕ್ಕೂಟ`ಎ',  ಬೇಳೂರು ಕೆನರಾ ಬ್ಯಾಂಕ್ ವತಿಯಿಂದ ವಾಟರ್ ಫಿಲ್ಟರ್, ಫ್ಯಾನ್ ನೀಡಿದ ಬೇಳೂರು ಹೊಸಿಮನೆ ಯಶೋಧ ನಾರಾಯಣ ಶೆಟ್ಟಿ, ದ್ವಜ ಕಟ್ಟೆ ಕಟ್ಟಿಸಿಕೊಟ್ಟ ಬೇಳೂರು ಗಣೇಶೋತ್ಸವ ಸಮಿತಿ ಅವರನ್ನು ಶಾಲಾ ವತಿಯಿಂದ ಸ್ಮರಣೆಕೆ ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ವಹಿಸಿದ್ದರು. ಪಂ.ಸದಸ್ಯರಾದ ಮಹೇಶ್ ಹೆಗ್ಡೆ, ಕೃಷ್ಣಯ್ಯ ಮರಕಾಲ, ನಿವೃತ್ತ ಮುಖ್ಯೋಪಾಧ್ಯಾಯ ರಾಜೀವ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶೇಖರ್ ಅಮೀನ್ ಹಾಗೂ ದಾನಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಉಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕ ರಮೇಶ್ ಶೆಟ್ಟಿ ಸ್ವಾಗತಿಸಿದರು. ಸವಿತಾ ಕಾರ್ಯಕ್ರಮ ನಿರ್ವಹಿಸಿ, ಶ್ರೀಧರ್ ಭಟ್ ವಂದಿಸಿದರು. ಬೋಜು ಶೆಟ್ಟಿ ಸಿಹಿ ತಿಂಡಿ ವಿತರಿಸಿದರು.
ಪೊಟೋ: ಬೇಳೂರು ಶಾಲೆ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com