ಶಿರೂರು: ನಾರಾಯಣ ಗುರುಗಳು ಸರ್ವಧರ್ಮ ಸಮನ್ವಯ ಸಾರುವುದರ ಜತೆಗೆ ಸಾಮಾಜಿಕ ಕ್ರಾಂತಿಯ ಹರಿಕಾರರೆನಿಸಿದರು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಘೋಷಣೆಯ ಮೂಲಕ ಎಲ್ಲ ಮಾನವರಲ್ಲಿ ಏಕತೆಯ ಬೀಜ ಬಿತ್ತಿದರು. ಅವರ ತತ್ವಾದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಮಾಧವ ಟೀಚರ್ ಹೇಳಿದರು.
ಶಿರೂರು ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ಕುಂಬ್ರಗೋಡ್ಲು ಅರಣ್ಯ ಭವನದಲ್ಲಿ ಗುರುವಾರ ನಡೆದ ನಾರಾಯಣ ಗುರುಗಳ 159ನೆಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸಗೈದರು.
ಸಂಘದ ಅಧ್ಯಕ್ಷ ಮಂಜುನಾಥ ಪೂಜಾರಿ ಕಾರ್ಯಕ್ರಮ ಉದ್ಘಾಟಿ ಸಿದರು. ಶಿಕ್ಷಕ ಪ್ರಭಾಕರ ಸ್ವಾಗತಿಸಿದರು. ಶಂಕರ ಬಿಲ್ಲವ ವಂದಿಸಿದರು. ಸಿ. ಎನ್. ಬಿಲ್ಲವ ನಿರೂಪಿಸಿದರು.
.
0 comments:
Post a Comment