ಸಾಲಿಗ್ರಾಮ: ಒಂದು ಕಾಲದಲ್ಲಿ ಸಾಮಾಜಿಕ ರಾಜಕೀಯ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳದೆ ಕೇವಲ ಮನೆವಾರ್ತೆಗೆ ಸೀಮಿತವಾಗಿದ್ದ ಮಹಿಳೆ ಇಂದು ಸಮಾಜದ ನಾನಾ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಹೆಣ್ಣು ಸಮಾಜದ ಕಣ್ಣು ಎನ್ನುವುದನ್ನು ಸಾಧಿಸಿ ತೋರಿಸಿದ್ದಾಳೆ ಎಂದು ತೆಕ್ಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಾರದಾ ಹೊಳ್ಳ ಹೇಳಿದರು.
ಸಾಲಿಗ್ರಾಮ ಗುರು ನರಸಿಂಹ ದೇವಳದ ಜ್ಞಾನ ಮಂದಿರದಲ್ಲಿ ಇತ್ತೀ ಚೆಗೆ ನಡೆದ ಮಹಿಳಾ ವೇದಿಕೆಯ ಮಹಾ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ವೇದಿಕೆಯ ಅಧ್ಯಕ್ಷೆ ಭಾರತಿ ಪ್ರಕಾಶ ಹೇರ್ಳೆ ಅಧ್ಯಕ್ಷತೆ ವಹಿಸಿದ್ದರು. ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶಂಕರನಾರಾಯಣ ಹೊಳ್ಳ ಸಮಾರಂಭ ದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೋಟ ವಿವೇಕ ಬಾಲಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಸುಲೋಚನ ಹೊಳ್ಳ ಮತ್ತು ನಿವೃತ್ತ ಶಿಕ್ಷಕಿ ಸಾವಿತ್ರಿ ಮೈಯ್ಯ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಸ್ಥಾಪಿಸಿದ ಅಶಕ್ತ ನಿಧಿಯ ನೆರ ವನ್ನು ವಿಶಾಲಮ್ಮನಿಗೆ ನೀಡ ಲಾಯಿತು. ವಿದ್ಯಾನಿಧಿಯ ಪುರಸ್ಕಾರ ವನ್ನು ವೈಶ್ಣವಿ ಮತ್ತು ವಿದ್ಯಾರ್ಥಿ ದತ್ತಿನಿಧಿಯ ನೆರವನ್ನು ಶರಣ್ಯನಿಗೆ ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯದರ್ಶಿ ಗೀತಾ ಅಧಿಕಾರಿ ವರದಿ ವಾಚಿಸಿದರು. ಯಶೋದಾ ಹೊಳ್ಳ ಲೆಕ್ಕ ಪತ್ರ ಮಂಡಿಸಿದರು. ಗೌರ ವಾಧ್ಯಕ್ಷೆ ಜಾಹ್ನವಿ ಹೇರ್ಳೆ ಪ್ರಾಸ್ತಾ ವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀಮತಿ ಉಪಾಧ್ಯ ವಂದಿಸಿದರು. ಲತಾ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment