ಗ್ರಾಮ ಪಂಚಾಯಿತಿ ಉಪಚುನಾವಣೆ ಫಲಿತಾಂಶ

ಕುಂದಾಪುರ: ತಾಲೂಕಿನ ಬೈಂದೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿದ್ದ ಆರು ಸ್ಥಾನಗಳಿಗೆ ಆ.4ರಂದು ನಡೆದ ಉಪ ಚುನಾವಣೆಯ ಎಣಿಕೆ ಕಾರ್ಯ ಗುರುವಾರ ನಡೆಯಿತು.
       ಉಪ್ಪುಂದ ಗ್ರಾಮ ಪಂಚಾಯಿತಿಯ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗೋಪಾಲ ಮಲ್ಯ (449 ಮತಗಳು) ತನ್ನ ಪ್ರತಿಸ್ಪರ್ಧಿ ಜನಾರ್ದನ ಖಾರ್ವಿ (425 ಮತಗಳು) ಅವರನ್ನು 24 ಮತಗಳಿಂದ ಸೋಲಿಸಿದ್ದಾರೆ. ರಾಧಾ (416) ಪ್ರತಿಸ್ಪರ್ಧಿ ಶಾರದಾ (412) ಅವರನ್ನು ನಾಲ್ಕು ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
      ಬಿಜೂರು ಗ್ರಾಮದ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಜುನಾಥ ದೇವಾಡಿಗ 361 ಮತಗಳನ್ನು ಪಡೆದು ಪ್ರತಿಸ್ಪರ್ಧಿ ರಮೇಶ್ ದೇವಾಡಿಗ (368 ಮತಗಳು) ಅವರನ್ನು 7 ಮತಗಳ ಅಂತರದಿಂದ ಸೋಲಿಸಿ ವಿಜಯಿಯಾಗಿದ್ದಾರೆ.
ನಾಡಾ ಗ್ರಾಮ ಪಂಚಾಯಿತಿಯ ಸೇನಾಪುರ ಗ್ರಾಮದ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಮರಾಜ ಶೆಟ್ಟಿ 184 ಮತಗಳನ್ನು ಪಡೆದರೆ, ಅಣ್ಣಪ್ಪ ಪೂಜಾರಿ 326 ಮತ ಪಡೆದು 142 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
   ಹೆಮ್ಮಾಡಿ ಗ್ರಾಮದ ಒಂದು ಸ್ಥಾನಕ್ಕೆ ಮರು ಚುನಾವಣೆ ನಡೆದಿದ್ದು, ಜೀತಾ ಕ್ರಾಸ್ತಾ 361 ಹಾಗೂ ವನಜಾ 244 ಮತಗಳನ್ನು ಪಡೆದುಕೊಂಡಿದ್ದು, 117 ಮತಗಳ ಅಂತರದಿಂದ ಜೀತಾ ಕ್ರಾಸ್ತಾ ಜಯ ಗಳಿಸಿದ್ದಾರೆ. ಹಟ್ಟಿಯಂಗಡಿ ಗ್ರಾಮದ ಒಂದು ಸ್ಥಾನಕ್ಕೆ ನಡೆದ ಮರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಮೃತಾ ಪಿ. ಭಂಡಾರಿ 274 ಮತಗಳನ್ನು ಪಡೆದುಕೊಂಡರು. ಪ್ರತಿಸ್ಪರ್ಧಿ ದೀಪಾ ಮೊಗವೀರ 444 ಮತ ಪಡೆದುಕೊಂಡು 110 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com