ಹಿಜಾಣ ಯು. ಸಂಘ: ಯಕ್ಷಗಾನ ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ: ಚಿತ್ತೂರು ಗ್ರಾಮದ ಹಿಜಾಣ ಶ್ರೀ ಚಿಕ್ಕು  ಯುವ ಸಂಘಟನೆ ನೇತೃತ್ವದಲ್ಲಿ ಶ್ರೀ ಚಿಕ್ಕು ಯುವ ಸಂಘಟನೆ ಹಿಜಾಣ ಮತ್ತು ಶ್ರೀ ಮೂಕಾಂಬಿಕಾ ಯಕ್ಷ ಕಲಾ ಸಂಘ ಕೊಲ್ಲೂರು ಇವರ ಯಕ್ಷಗಾನ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಅ.25ರಂದು ಹಿಜಾಣ ಚಿಕ್ಕು ದೈವಸ್ಥಾನ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಶಶಿಧರ ಶೆಟ್ಟಿ ಉದ್ಘಾಟಿಸಿದರು. ಶ್ರೀ ಚಿಕ್ಕು ಯುವ ಸಂಘಟನೆಯ ಅಧ್ಯಕ್ಷ ದೇವು ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪಶು ವೈದ್ಯರಾದ ತ್ಯಾಂಪಣ್ಣ ಶೆಟ್ಟಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನಿವಂಶೀಯ ಮುಕ್ತೇಸರ ಸೀತಾರಾಮ ಶೆಟ್ಟಿ, ವಂಡ್ಸೆ ಸಿ.ಎ ಬ್ಯಾಂಕ್ ನಿರ್ದೇಶಕ ಸುಧೀರ ಕುಮಾರ್ ಶೆಟ್ಟಿ, ಪತ್ರಕರ್ತ ಪ್ರಭಾಕರ ಆಚಾರ್ಯ, ರಂಜು ಶ್ಯಾಮಿಯಾನದ ಮಾಲಕ ಉದಯ ನಾಯ್ಕ್, ಹಿಜಾಣ ಗೋಪಾಲ ಶೆಟ್ಟಿ, ಪಾತ್ರಿಗಳಾದ ಸದಾಶಿವ ಶೆಟ್ಟಿ ಗಾಣದಮಕ್ಕಿ ಮೊದಲಾದವರು ಉಪಸ್ಥಿತರಿದ್ದರು.
ಅಕ್ಷಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ಮಂಜುನಾಥ ಚಂದನ್ ನೆಂಪು ಕಾರ್ಯಕ್ರಮ ನಿರ್ವಹಿಸಿದರು. ಸಂದೀಪ ಚಂದನ್ ವಂದಿಸಿದರು. ನಂತರ ಕರ್ಣ ಪರ್ವ ಯಕ್ಷಗಾನ ಪ್ರದರ್ಶನ ನಡೆಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com