ಅಗಸ್ಟ್ 26 ರಿಂದ ಜ್ಞಾನ ವಿಕಾಸ ಯೋಗ ಶಿಬಿರ

ಕುಂದಾಪುರ: ಆರೋಗ್ಯ ಮತ್ತು ಸಾಂಸ್ಕøತಿಕ ವಿಕಾಸ ಕೇಂದ್ರ (ರಿ) ಬ್ರಹ್ಮಾವರ, ಜ್ಞಾನವಿಕಾಸ ಯೋಗ ಕೇಂದ್ರ ಕುಂದಾಪುರ, ಪ್ರಗತಿ ಯುವಕ ಮಂಡಲ ಹುಣ್ಸೆಮಕ್ಕಿ, ಶಾಲಾಭಿವೃದ್ಧಿ ಸಮಿತಿ ಹುಣ್ಸೆಮಕ್ಕಿ ಇವರ ಸಹಬಾಗಿತ್ವದಲ್ಲಿ ಅ.26 ಸೋಮವಾರದಿಂದ ಪ್ರತಿದಿನ ಸಂಜೆ 5:30 ರಿಂದ ಹುಣ್ಸೆಮಕ್ಕಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ  ಎರಡನೇ ಬ್ಯಾಚ್‍ನ ಯೋಗ ಶಿಬಿರ ನಡೆಯಲಿದೆ.  ಮುಕ್ತಾ ಮಾತಾಜೀ ಮತ್ತು ಹರೀಶ್ ಗುರೂಜಿ ಅವರು ಜೀವನದ ಸರ್ವತೋಮುಖ ಅಭಿವೃದ್ಧಿಗಾಗಿ ಸರಳ ಯೋಗ, ಪ್ರಾಣಾಯಾಮ, ಧ್ಯಾನ, ಯೋಗ ನಿದ್ರೆ, ಧಾರ್ಮಿಕ ಪ್ರವಚನ, ಗಾಯಂತ್ರಿ ಮಂತ್ರ, ಅಗ್ನಿಹೋತ್ರ ಮುಂತಾದ ವಿವಿಧ ಯೋಗದ ಕ್ರಿಯೆಗಳ ಬಗ್ಗೆ ತರಬೇತಿ ನೀಡಲಿದ್ದಾರೆ. 
ಅಗಸ್ಟ್.25 ರವಿವಾರ ಅಪರಾಹ್ನ 3:30 ಕ್ಕೆ ಹುಣ್ಸೆಮಕ್ಕಿ ಹಿ.ಪ್ರಾ. ಶಾಲೆಯಲ್ಲಿ ನಡೆಯಲಿರುವ ಪ್ರಥಮ ಯೋಗ ಶಿಬಿರದವರಿಂದ ಕುಟುಂಭೋತ್ಸವ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶ ಇದೆ. ಮರುದಿನ ನಡೆಯುವ ಯೋಗ ಶಿಬಿರದಲ್ಲಿ ಭಾಗವಹಿಸುವವರು  ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ 9341034666 ಅವರನ್ನು ಸಂಪರ್ಕಿಸಿ, ನೋಂದಾವಣೆಗೆ ಕೋರಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com