ಎಂಜಿಎಂ ಕಾಲೇಜಿನಲ್ಲಿ ಫೋಟೊ ಸ್ಪರ್ಧೆ

ಉಡುಪಿ: ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಎಂಜಿಎಂ ಕಾಲೇಜು ಪತ್ರಿಕೋದ್ಯಮ ವಿಭಾಗ ವತಿಯಿಂದ 'ಫೊಟೋಗ್ರಾಫಿಯಾ ಎಂಜಿಎಂ ಅವಾರ್ಡ್ 2013' ಛಾಯಾಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ. ಸಾರ್ವಜನಿಕರ ಭಾಗವಹಿಸುವಿಕೆಗೆ ಮುಕ್ತ ಅವಕಾಶ ಇರುವ ಈ ಸ್ಪರ್ಧೆಗೆ 'ಮಳೆಗಾಲದಲ್ಲಿ ಮೀನುಗಾರಿಕೆ' ಎಂಬ ವಿಷಯ ನೀಡಲಾಗಿದೆ.
     ಅತ್ಯುತ್ತಮ ಒಂದು ಚಿತ್ರಕ್ಕೆ 'ಫೊಟೋಗ್ರಾಫಿಯಾ ಎಂಜಿಎಂ ಅವಾರ್ಡ್‌' ಫಲಕ ಹಾಗೂ ರು. 5000 ನಗದು ಬಹುಮಾನ ಮತ್ತು ಉತ್ತಮ 10 ಛಾಯಾಚಿತ್ರಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಛಾಯಾಚಿತ್ರದ ಮುದ್ರಿತ ಪ್ರತಿ 12್ಢ18 ಗಾತ್ರದಲ್ಲಿರಬೇಕು, ಚಿತ್ರದ ಮೇಲೆ ಏನನ್ನೂ ಬರೆಯಬಾರದು.
   ಪ್ರತ್ಯೇಕ ಹಾಳೆಯಲ್ಲಿ ಛಾಯಾಚಿತ್ರಕ್ಕೆ ಸೂಕ್ತ ಶೀರ್ಷಿಕೆ, ಛಾಯಾಗ್ರಾಹಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇಮೇಲ್ ವಿಳಾಸ ಬರೆದು ಆ.14ರೊಳಗೆ ಫೊಟೋಗ್ರಾಫಿಯಾ, ಪತ್ರಿಕೋದ್ಯಮ ವಿಭಾಗ, ಎಂಜಿಎಂ ಕಾಲೇಜು, ಉಡುಪಿ- 576102 ಈ ವಿಳಾಸಕ್ಕೆ ಕಳುಹಿಸಬೇಕು. ಆ.17ರಂದು ಫಲಿತಾಂಶ ಘೋಷಿಸಲಾಗುವುದು. ಹೆಚ್ಚಿನ ವಿವರಗಳಿಗೆ ಮೊ. 9980665368 ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com