ಯಾಸಿನ್ ಜೊತೆಗೆ ಭಟ್ಕಳ್‌ ಬರೆಯುವುದು ಬಿಟ್ಟು ಬಿಡಿ

ಭಟ್ಕಳ: ತಮ್ಮೂರಿನ ಹೆಸರು ಉಗ್ರನೊಂದಿಗೆ ಸೇರಿಕೊಂಡಿರುವುದು ಭಟ್ಕಳದ ಜನರಿಗೆ ಬಹಳ ಕಿರಿಕಿರಿಯುಂಟು ಮಾಡುತ್ತಿದೆ. ಹೀಗಾಗಿ ಅವರು ಉಗ್ರ ಯಾಸಿನ್‌ ಭಟ್ಕಳ್‌ನ ಸುದ್ದಿ ಬರೆಯುವಾಗ ಭಟ್ಕಳ್‌ ಬಿಟ್ಟು ಯಾಸಿನ್‌ ಎಂದು ಮಾತ್ರ ಬರೆದರೆ ಸಾಕು ಎಂಬುದಾಗಿ ವಿನಂತಿಸಿದ್ದಾರೆ.

ನಾವು ಶಾಂತಿ ಪ್ರಿಯ ಜನರು. ಆದರೆ ಭಟ್ಕಳದ ಸಹೋದರರಾದ ರಿಯಾಜ್‌, ಇಕ್ಬಾಲ್‌ ಮತ್ತು ಯಾಸಿನ್‌ ಉಗ್ರರಾಗಿ ತಮ್ಮ ಹೆಸರಿನ ಜತೆಗೆ ಭಟ್ಕಳ್‌ ಸೇರಿಸಿಕೊಂಡ ಬಳಿಕ ನಮಗೆ ಭಟ್ಕಳದವರು ಎಂದು ಹೇಳಿಕೊಳ್ಳಲು ಅಂಜಕೆಯಾಗುತ್ತಿದೆ. ಭಟ್ಕಳದವರು ಎಂದು ಹೇಳಿದಾಗ ಜನರು ನಮ್ಮನ್ನು ನೋಡುವ ದೃಷ್ಟಿಕೋನವೆ ಬದಲಾಗುತ್ತದೆ. ಹೊರ ಊರುಗಳಿಗೆ ಹೋದಾಗ ಇದರಿಂದಾಗಿ ಬಹಳ ಸಮಸ್ಯೆಯಾಗುತ್ತಿದೆ ಎಂದು ಜನರು ತಮ್ಮ ಕಷ್ಟ ತೋಡಿಕೊಂಡಿದ್ದಾರೆ.

ಈ ಮೂವರು ಸಹೋದರರಿಂದಾಗಿ ಭಟ್ಕಳಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಹಲವು ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಚಿನ್ನಾಭರಣ, ಬಿರಿಯಾನಿ ಭಟ್ಕಳದ ಐಸ್‌ಕ್ರೀಮ್‌ಗೆ ಪ್ರಸಿದ್ಧರಾಗಿರುವ ಈ ಪುಟ್ಟ ಪಟ್ಟಣದ ಜನರು ಯಾಸಿನ್‌ ಸೆರೆಯಾದ ಸುದ್ದಿ ಕೇಳಿ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಯಾರೂ ಕಡು ಪಾತಕಿ ಸೆರೆಯಾಗಿರುವುದಕ್ಕೆ ವಿಷಾದ ಹೊಂದಿಲ್ಲ. ಉಳಿದಿಬ್ಬರು ಸಿಕ್ಕಿದರೆ ಊರಿಗೆ ಅಂಟಿದ ಕಳಂಕ ನಿವಾರಣೆಯಾಗಬಹುದು ಎಂದು ಜನರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರೆ.

Udayavani | Aug 30, 2013
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com