ಹಂಗಳೂರು : ಆದಿತ್ಯ ವಿವಿದೋದ್ದೇಶ ಸಹಕಾರ ಸಂಘದ ಮಹಾಸಭೆ

ಕುಂದಾಪುರ: ಆದಿತ್ಯ ವಿವಿಧೋದ್ದೇಶ ಸಹಕಾರ ಸಂಘ (ನಿ) ಹಂಗಳೂರು ಇದರ ಮಹಾಸಭೆ ಅ.23ರಂದು ಸಂಘದ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ಪ್ರವರ್ತಕರಾದ ರಾಜೇಂದ್ರ ಹೆಗ್ಡೆ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕ ಸ್ವಾವಲಂಬನೆಯ ದೃಷ್ಠಿಯೊಂದಿಗೆ ಹುಟ್ಟಿಕೊಂಡ ಸಂಘದ ಸರ್ವಾಂಗೀಣ ಬೆಳವಣಿಗೆಗೆ ಸದಸ್ಯರ ಪಾತ್ರ ಬಹುಮುಖ್ಯವಾದುದು. ಆದುದರಿಂದ ಸಂಸ್ಥೆಯನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ಎಲ್ಲರ ಸಹಕಾರ ಅಗತ್ಯ ಎಂದರು. 
ಈ ಸಂದರ್ಭದಲ್ಲಿ ಸಂಘದ ಆಯವ್ಯಯವನ್ನು ಮಂಡಿಸಿ ಮಂಜೂರಾತಿ ಪಡೆಯಲಾಯಿತು. ಮುಂದಿನ ಅಂದಾಜು ಪಟ್ಟಿಯನ್ನು ಸದಸ್ಯರ ಅವಗಾಹನೆಗೆ ತರಲಾಯಿತು.
ಸಂಘದ ಪ್ರಧಾನ ವ್ಯವಸ್ಥಾಪಕ ನಾರಾಯಣ ಬಿಲ್ಲವ ಮಾತನಾಡಿ ಸಂಘದ ಬೆಳವಣಿಗೆಗೆ ಸದಸ್ಯರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡರು.
ಚುನಾವಣಾ ನಿರ್ವಾಚನಾಧಿಕಾರಿ ಕೆ.ಆರ್.ಲೋಹಿತ್ ಅವರು ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ನಿರ್ದೇಶಕರಾಗಿ 15 ಮಂದಿಯನ್ನು ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಘೋಷಣೆ ಮಾಡಿರುವ ವಿಚಾರವನ್ನು ತಿಳಿಸಿ ಹೆಸರನ್ನು ಪ್ರಕಟಿಸಿದರು.
ವೇದಿಕೆಯಲ್ಲಿ ಮುಂಬೈನ ಶಿಲ್ಪಾ ಹೌಸಿಂಗ್ ಕೋ ಅಪರೇಟಿವ್ ಸೊಸೈಟಿ ಛೇರ್‍ಮನ್ ಕೆ.ವಿಶ್ವನಾಥ ಹೆಗ್ಡೆ ಆದಿತ್ಯ ವಿವಿಧೋದ್ದೇಶ ಸಹಕಾರ ಸಂಘದ ಪ್ರವರ್ತಕರಾದ ವಿ.ದಿನೇಶ್ ದೇವಾಡಿಗ, ಎ.ಜಯರಾಮ ಶೆಟ್ಟಿ, ರತ್ನಾಕರ ಕೋಟೆಕಾರ್, ಸಂಜೀವ ದೇವಾಡಿಗ, ಕೆ.ಕೃಷ್ಣ ದೇವಾಡಿಗ, ಹರೀಶ್ ಬಿಲ್ಲವ, ಉದಯ ಮೆಂಡನ್, ಪ್ರಶಾಂತ್ ಕೊಲ್ಲೂರು, ರಾಘವೇಂದ್ರ ಹೆಗ್ಡೆ, ಸಂತೋಷ ಕೋಣಿ, ಪ್ರವೀಣ್ ಕುಮಾರ್ ಕೆ.ಪಿ., ಪ್ರವೀಣ್ ಕೋಟ, ಆಶಾ ಚಂದ್ರಶೇಖರ್, ವಿಜಯಲಕ್ಷ್ಮೀ ಇನ್ನಿತರರು ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ನಾರಾಯಣ ಬಿಲ್ಲವ ಸ್ವಾಗತಿಸಿ, ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com