ಮಗ ಬದುಕಿರುವುದು ಕೇಳಿ ನಿರಾಳರಾದ ಯಾಸಿನ್ ತಂದೆ

ಸುದ್ದಿ: ತಮ್ಮ ಪುತ್ರ ಅಹಮ್ಮದ್‌ ಜರ್ರಾರ್‌ ಸಿದ್ಧಿಬಾಪಾ (ಯಾಸಿನ್‌ ಭಟ್ಕಳ್‌)ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಮುಗಿಸಬಹುದು ಎಂಬ ಶಂಕೆ ಇತ್ತು. ಆದರೆ ಈಗ ಆತನ ಬಂಧನವಾಗಿದ್ದಾನೆಂಬ ಸುದ್ದಿ ಕೇಳಿ ನಿರಾಳಭಾವ ಮೂಡಿದೆ ಎಂದು ಯಾಸಿನ್‌ ಭಟ್ಕಳ್‌ನ ತಂದೆ ಜರ್ರಾರ್‌ ಸಿದ್ಧಿಬಾಪಾ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ವಿಚಾರಣೆ ವೇಳೆ ಅಪರಾಧಿ ಎಂಬುದು ಸಾಬೀತಾದರೆ ಆತನಿಗೆ ಶಿಕ್ಷೆ ವಿಧಿಸಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯಾಸಿನ್‌ ಬಂಧನ ಹಿನ್ನೆಲೆಯಲ್ಲಿ ಆತನ ತಂದೆ ಸಿದ್ದಬಾಪಾ ಹಾಗೂ ಚಿಕ್ಕಪ್ಪ ಯಾಕೂಬ್‌ ಸಿದ್ಧಿಬಾಪಾ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿದರು. ತಮ್ಮ ಪುತ್ರನ ಬಂಧನದಿಂದ ನಿರಾಳಭಾವ ಮೂಡಿದೆ. ಪೊಲೀಸರು ಆತನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಮುಗಿಸಬಹುದು ಎಂಬ ಶಂಕೆಯನ್ನು ಇದು ನಿವಾರಿಸಿದೆ ಎಂದರು. 'ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ಆತ ಯಾವುದೇ ಅಪರಾಧ ಎಸಗಿರುವುದು ವಿಚಾರಣೆ ವೇಳೆ ಸಾಬೀತಾದಲ್ಲಿ ಅವನಿಗೆ ಶಿಕ್ಷೆ ವಿಧಿಸಲಿ. ಆದರೆ, ತಪ್ಪತಸ್ಥ ಎಂದು ಸಾಬೀತು ಆಗುವವರೆಗೆ ಪ್ರತಿಯೊಬ್ಬ ವ್ಯಕ್ತಿಯೂ ಮುಗ್ಧ ಎನ್ನುವ ಮೂಲತತ್ವ ಪಾಲನೆಯಾಗಲಿ' ಎಂದು ವಿನಂತಿಸಿದರು.

* ಆತ 10ನೇ ತರಗತಿಯನ್ನೂ ಪಾಸ್‌ ಮಾಡಿಲ್ಲ:

ಯಾಸಿನ್‌ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಸತ್ಯಕ್ಕೆ ವಿರುದ್ಧವಾದ ವಿಚಾರಗಳು ಭಿತ್ತರಗೊಳ್ಳುತ್ತಿವೆ. ಹಾಗಾಗಿ, ಸತ್ಯವನ್ನು ಮಾಧ್ಯಮದ ಮುಂದಿಡುತ್ತಿದ್ದೇವೆ. ಆತ ಜನಿಸಿದ್ದು 1983ರಲ್ಲಿ. 1ರಿಂದ 10ನೇ ತರಗತಿವರೆಗಿನ ಶಿಕ್ಷಣವನ್ನು ಪೂರೈಸಿದ್ದು ಭಟ್ಕಳದಲ್ಲಿ. ಆದರೆ, 10ನೇ ಕ್ಲಾಸ್‌ನ್ನು ಪಾಸು ಮಾಡಿಲ್ಲ. 2005ರ ನವೆಂಬರ್‌ನಲ್ಲಿ ದುಬೈಗೆ ತೆರಳಿದ. 2007ರಲ್ಲಿ ದುಬೈನಿಂದ ನಾಪತ್ತೆಯಾಗಿದ್ದ. ಕುಟುಂಬ ಸದಸ್ಯರು ಮತ್ತು ದುಬೈ ಗುಪ್ತಚರ ದಳದ ಸಿಬ್ಬಂದಿ ಆತನ ಪತ್ತೆಗೆ ಸಾಕಷ್ಟು ಯತ್ನಿಸಿದರೂ, ಆತನ ಸುಳಿವು ಸಿಕ್ಕಿರಲಿಲ್ಲ. ದುಬೈನಿಂದ ಕಾಣೆ ಆಗುವವರೆಗೆ ಆತ ಪುಣೆಗೆ ಕಾಲಿಟ್ಟಿರಲಿಲ್ಲ ಎಂದರು.

* ತಪ್ಪಿತಸ್ಥ ಎಂದಾದರೆ ಶಿಕ್ಷೆಯಾಗಲಿ

ಪುತ್ರನ ಬಂಧನದಿಂದ ನಿರಾಳಭಾವ ಮೂಡಿದೆ. ಆತನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಮುಗಿಸಬಹುದು ಎಂಬ ಶಂಕೆಯನ್ನು ಇದು ನಿವಾರಿಸಿದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ಆತ ಯಾವುದೇ ಅಪರಾಧ ಎಸಗಿರುವುದು ವಿಚಾರಣೆ ವೇಳೆ ಸಾಬೀತಾದಲ್ಲಿ ಅವನಿಗೆ ಶಿಕ್ಷೆ ವಿಧಿಸಲಿ. ಆದರೆ, ತಪ್ಪತಸ್ಥ ಎಂದು ಸಾಬೀತಾಗುವವರೆಗೆ ಪ್ರತಿಯೊಬ್ಬ ವ್ಯಕ್ತಿಯೂ ಮುಗ್ಧ ಎನ್ನುವ ಮೂಲತತ್ವ ಪಾಲನೆಯಾಗಲಿ.
- ಜರ್ರಾರ್‌ ಸಿದ್ಧಿಬಾಪಾ, ಯಾಸಿನ್‌ ಭಟ್ಕಳ್‌ನ ತಂದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com