ಪ್ರತಿಭಾವಂತರಿಗೆ ಪ್ರೋತ್ಸಾಹ ಅಗತ್ಯ: ಶಾಸಕ ಕೆ. ಗೋಪಾಲ ಪೂಜಾರಿ

ಬೈಂದೂರು: ಜಾಗತಿಕ ಮಟ್ಟದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಭಾವಂತರಿದ್ದರೂ ಸಹ ಸೂಕ್ತ ಪ್ರೋತ್ಸಾಹ ಕೊರತೆಯಿಂದಾಗಿ ಅವಕಾಶ ಪಡೆದುಕೊಳ್ಳಲು ಸಾಧವಾಗುತ್ತಿಲ್ಲ. ಹೀಗಾಗಿ ಪ್ರತಿಭಾವಂತರಿಗೆ ಪ್ರೋತ್ಸಾಹ ಮುಖ್ಯವಾಗಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ನುಡಿದರು.
 ಅವರು ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ನಾಗಶ್ರೀ ದತ್ತಿನಿಧಿ ಪ್ರತಿಷ್ಠಾನ ಶಿರೂರು ಇದರ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತ ಕೇವಲ ವೈಯಕ್ತಿಕ ಚಿಂತನೆಗಿಂತ ಸಮಾಜದ ಅಭಿವೃದ್ಧಿಗೆ ಕಾಳಜಿ ಮಾಡಿದಾಗ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತದೆ ಎಂದರು.
     ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಶೈಕ್ಷಣಿಕವಾಗಿ ಸಾಧನೆ ಮಾಡಿದಾಗ ಮನ್ನಣೆ ದೊರೆಯುತ್ತದೆ. ಸಾಧಕರನ್ನು ಗುರುತಿಸುವುದರಿಂದ ಪ್ರತಿಭಾವಂತರಿಗೆ ಪ್ರೇರಣೆ ನೀಡಿದಂತಾಗುತ್ತದೆ. ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಇಂತಹ ಉತ್ತಮ ಕಾರ್ಯಗಳು ಶ್ಲಾಘನೀಯ ಎಂದರು.
 ನಿವೃತ್ತ ಪ್ರಾಂಶುಪಾಲ ಕನ್ನಡ ಪಂಡಿತ್ ವಾಮನ್ ಇಡ್ಯಾ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಬದಲಾವಣೆ ತಂದಿದೆ. ಬದುಕಿನ ಅನುಭವದ ಜೊತೆಗೆ ಶೈಕ್ಷಣಿಕ ಜ್ಝಾನ ಮೂಡಬೇಕು. ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಚಿಂತನೆಯಿರಬೇಕು ಎಂದರು.
 ಮುಖ್ಯ ಅತಿಥಿಯಾಗಿ ಸಾಹಿತಿ ಜಮೀರುಲ್ಲಾ ಶರೀಫ್, ತಾಲೂಕು ಪಂಚಾಯತ್ ಸದಸ್ಯ  ರಾಜು ಪೂಜಾರಿ, ನಾಗಶ್ರೀ ದತ್ತಿನಿಧಿ ಪ್ರತಿಷ್ಠಾನದ ಅಧ್ಯಕ್ಷ ಮಂಜುನಾಥ ಬಿಲ್ಲವ ಮುಂಬಯಿ ಉಪಸ್ಥಿತರಿದ್ದರು.
 ಈ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ನೃತ್ಯ ಪಟುಗಳಾದ ಅಂಕಿತಾ ನಾಯ್ಕ ಮತ್ತು ಸೌಜನ್ಯ ಬಿಲ್ಲವ ಮುಂಬೈಯವರನ್ನು ಸನ್ಮಾನಿಸಲಾಯಿತು. ಪ್ರತಿಭಾ ಕೊಡೂರು ಇವರಿಂದ "ರುಕ್ಮಿಣಿ ಕಲ್ಯಾಣ ಕಥಾ ಕಾಲಕ್ಷೇಪ" ನಡೆಯಿತು.
ಮಾಧವ ಟೀಚರ್ ಸ್ವಾಗತಿಸಿ, ಅರುಣ್ ಕುಮಾರ್ ಕಾರ್ಯಕ್ರಮ  ಶಿರೂರು ನಿರೂಪಿಸಿ, ಮಂಜುನಾಥ ಗಾಣಿಗ ವಂದಿಸಿದರು.

Photos: AK Shiroor
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com