ಗ್ರಾಮಸಭೆ ಭರವಸೆ ಮೂಡಿಸಲಿ: ಕೆ. ಪ್ರತಾಪಚಂದ್ರ ಶೆಟ್ಟಿ

 ಕುಂದಾಪುರ: ಗ್ರಾಮಸಭೆ ಪಂಚಾಯತ್ ರಾಜ್ ವ್ಯವಸ್ಥೆಯ ತಾಯಿಬೇರು. ಅದರಲ್ಲಿ ಗ್ರಾಮದ ಜನರು ಭಾಗವಹಿಸಿ ಅಭಿವೃದ್ಧಿ ಚಿಂತನೆ ನಡೆಸಿ, ಯೋಜನೆ ರೂಪಿಸಬೇಕು. ಬಡತನ ನಿವಾರಣೆಯ ಫಲಾನು ಭವಿಗಳ ಆಯ್ಕೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದರು.
       ಕನ್ಯಾನದ `ನಮ್ಮಭೂಮಿ'ಯಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಎರಡು ದಿನಗಳ ಗ್ರಾಮ ಪಂಚಾಯಿತಿ ಸಬಲೀಕರಣ ಕಾರ್ಯಾ ಗಾರದ ಎರಡನೆಯ ದಿನವಾದ ಮಂಗಳವಾರ ಭಾಗವಹಿಸಿದ ಅವರು ಎಲ್ಲರನ್ನುದ್ದೇಶಿಸಿ ಮಾತನಾಡಿದರು. 
      ಎಲ್ಲ ಸರ್ಕಾರಿ ವ್ಯವಸ್ಥೆಗಳನ್ನು ಅದರೊಳಗೆ ತಂದು ಜನರ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಒಂದು ಸಭೆಯಲ್ಲಿ ಸ್ವೀಕರಿಸಿದ ನಿರ್ಣ ಯಗಳು ಯಶಸ್ವಿಯಾಗಿ ಅನುಷ್ಠಾನ ಗೊಳ್ಳಬೇಕು.  ಹಾಗಾದಾಗ ಜನರಿಗೆ ಗ್ರಾಮಸಭೆಯಲ್ಲಿ ಭರವಸೆ ಮೂಡು ತ್ತದೆ. ಅವರು ಗ್ರಾಮ ಸಭೆಗಳಿಗೆ ಬರುವ ಮನಸ್ಸು ಮಾಡುತ್ತಾರೆ ಎಂದರು.
    ವಾರ್ಡ್‌ಸಭೆ, ಗ್ರಾಮಸಭೆ ನಡೆಸಲು ವಿಫಲವಾಗುವ ಸದಸ್ಯ, ಅಧ್ಯಕ್ಷರನ್ನು ಪದಚ್ಚುತಗೊಳಿಸಲು ಅವಕಾಶ ಕಲ್ಪಿಸುವ ಉದ್ದೇಶದ ಕಾಯಿದೆ ತಿದ್ದುಪಡಿ ವಿಧಾನಸಭೆಯಲ್ಲಿ ಸ್ವೀಕಾರ ಗೊಂಡಿದೆ. ವಿಧಾನ ಪರಿಷತ್ತಿನ ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲ 25 ಪ್ರತಿನಿಧಿಗಳು ಇದನ್ನು ವಿರೋಧಿ ಸುತ್ತಿದ್ದಾರೆ. ಸದ್ಯ ಇದನ್ನು ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸ ಲಾಗಿದೆ. ಈ ರೀತಿಯ ಹೊಣೆಯನ್ನು ಕೇವಲ ಗ್ರಾಮ ಪಂಚಾಯಿತಿ ಪ್ರತಿನಿಧಿ ಗಳಿಗೆ ಕಡ್ಡಾಯಗೊಳಿಸುವುದು ಸರಿ ಯಲ್ಲ ಎಂದರು.
    ಸಿಡಬ್ಲ್ಯೂಸಿಯ ಕಾರ್ಯಕಾರಿ ನಿರ್ದೇಶಕ ಬಿ. ದಾಮೋದರ ಆಚಾರ್ಯ ಎರಡು ದಿನಗಳ ಕಾರ್ಯಾ ಗಾರದ ವಿವರ  ನೀಡಿದರು. ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ ಶೆಟ್ಟಿ ವಂದಿಸಿದರು. ಮಕ್ಕಳ ಪಂಚಾಯಿತಿ, ಮಕ್ಕಳ ಗ್ರಾಮಸಭೆ, ವಾರ್ಡ್, ಗ್ರಾಮ ಸಭೆಗಳನ್ನು ಪರಿಣಾಮಕಾರಿಯಾಗಿಸು ವ ಕುರಿತು ವಿಚಾರ ವಿನಿಮಯ ನಡೆಯಿತು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com