ಬಿಲ್ವವೃಕ್ಷ ಆಂದೋಲನ: ಶ್ರೀ ಮೂಕಾಂಬಿಕಾ ಮ. ಮಂಡಳಿಗಳ ಒಕ್ಕೂಟ

ಕುಂದಾಫುರ: ಅಳಿವಿನಂಚಿನಲ್ಲಿರುವ ಸಸ್ಯ ಪ್ರಬೇಧಗಳನ್ನು ಉಳಿಸಿ ಪರಿಸರವನ್ನು ಸಂರಕ್ಷಿಸುವ ಕಾರ್ಯ ನಮ್ಮೆಲ್ಲರಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಕ್ಷೀಣಿಸುತ್ತಿರುವ ಬಿಲ್ವ ಮರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬಿಲ್ವ ವೃಕ್ಷ ಆಂದೋಲನ ರೂಪುಗೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಹಸಿರು ಭಾರತ ಆಂದೋಲನದ ವಿಶ್ವಸ್ಥ ಡಾ.ಉತ್ತಮ ಕುಮಾರ್ ಶೆಟ್ಟಿ ಹೇಳಿದರು.
     ಅವರು ಕುಂದಾಪುರ ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿಗಳ ಒಕ್ಕೂಟ (ರಿ.) ಆಶ್ರಯದಲ್ಲಿ ಬಿಲ್ವ ವೃಕ್ಷ ಆಂದೋಲನದ ಅಂಗವಾಗಿ ಹಮ್ಮಿಕೊಂಡ ಬಿಲ್ವವೃಕ್ಷ ಮಹತ್ವ ಹಾಗೂ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಟ್ಟಡದ ಆವರಣದಲ್ಲಿ ಈ ಸಂದರ್ಭದಲ್ಲಿ ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಕೆ.ರಾಧಾ ದಾಸ್ ಬಿಲ್ವ ಸಸಿಯನ್ನು ನೆಟ್ಟರು. ಮಹಿಳಾ ಮಂಡಳದ ಸದಸ್ಯರಿಗೆ ಬಿಲ್ವಗಿಡಗಳನ್ನು ವಿತರಿಸಲಾಯಿತು.
     ವೇದಿಕೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ಮಿಡ್‍ಟೌನ್ ಅಧ್ಯಕ್ಷ ರಂಜಿತ್‍ಕುಮಾರ್ ಶೆಟ್ಟಿ, ಕುಂದಾಪುರ ತಾ.ಪಂ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಭಾಗೀರಥಿ ಕಾರಂತ್, ಹಸಿರು ಭಾರತ ಆಂದೋಲನದ ವಿಶ್ವಸ್ಥ ಸಂತೋಷ ಕೋಣಿ, ಉದ್ಯಮಿಗಳಾದ ಆವರ್ಸೆ ಸುಧಾಕರ ಶೆಟ್ಟಿ, ಗೌತಮ ಹೆಗ್ಡೆ ಇನ್ನಿತರರು ಉಪಸ್ಥಿತರಿದ್ದರು. ಅಧ್ಯಕ್ಷೆ ರಾಧಾದಾಸ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಜಯಂತಿ ಎನ್.ಐತಾಳ್ ವಂದಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com