ಸಂಭ್ರಮದ ಈದುಲ್‌ ಫಿತರ್‌ ಆಚರಣೆ

ಕುಂದಾಪುರ: ಇಲ್ಲಿನ ಮುಸ್ಲಿಮ್‌ ಬಾಂಧವರು ಸಂಭ್ರಮದಿಂದ ರಮಝಾನ್‌ ಹಬ್ಬವನ್ನು ಆಚರಿಸಿದರು. ಕುಂದಾಪುರ ಜಾಮಿಯಾ ಮಸೀದಿಯಲ್ಲಿ ಬೆಳಗ್ಗೆ  ಮೌಲಾನಾ ಅಬ್ದುಲ್‌ ರಹಿಮಾನ್‌ ಅವರ ನೇತೃತ್ವದಲ್ಲಿ ಈದ್‌ ನಮಾಝ್ ನೆರವೇರಿತು. ನಮಾಝ್ ನಂತರ ಜರಗಿದ ಸಲಾತ್‌ ಮೆರವಣಿಗೆಯಲ್ಲಿ ಸಾಗಿದ ಮುಸ್ಲಿಮ್‌ ಬಾಂಧವರು ಪಾರಿಜಾತ ವೃತ್ತ ಸಮೀಪದಲ್ಲಿರುವ ಈದ್ಗಾ ಮೈದಾನಕ್ಕೆ ಸಾಗಿ ಅಲ್ಲಿ ಸಾಮೂಹಿಕ ಪ್ರಾರ್ಥನೆ ಮುಗಿಸಿ ಪುನ: ಮೆರವಣಿಗೆಯಲ್ಲಿ ಮಸೀದಿ ಬಂದು ಪರಸ್ಪರ ಆಲಂಗಿಸಿ ಕೊಳ್ಳುವ ಮೂಲಕ ಈದ್‌ ಶುಭಾಶಯಗಳನ್ನು ವಿನಿಮಯಿಸಿ ಕೊಂಡರು. ಈದ್‌ನ ಉಸ್ತುವಾರಿಯನ್ನು ಜಮಾತ್‌ ಅಧ್ಯಕ್ಷ ಹಾಜಿ ಅಬ್ದುಲ್‌ ಖಾದರ್‌ ಯುಸುಫ್‌ ವಹಿಸಿದ್ದು ಸಕಲರಿಗೂ ಈದ್‌ ಶುಭಾಶಯ ಕೋರಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com