ಗೊಂಬೆಯಾಟ ಕಲಾವಿದ ದಿನಕರ ಭಟ್‍ರಿಗೆ ನುಡಿನಮನ

ಕುಂದಾಪುರ: ಹುಟ್ಟಿದ ಮನುಷ್ಯ ಸಾಯಲೇ ಬೇಕಾದರೂ ಕೂಡ ಬದುಕಿನ ಹಾದಿಯಲ್ಲಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ರೀತಿ ನೀತಿ ಮುಖ್ಯವಾಗುತ್ತದೆ. ಅದರಂತೆ ದಿನಕರ ಭಟ್‍ರು ಕಲಾ ಜಗತ್ತಿಗೆ ತಮ್ಮದೆ ಕೊಡುಗೆಯನ್ನು ನೀಡಿ ದೇಶ ವಿದೇಶಗಳಲ್ಲಿ ಸಂಚರಿಸಿ ಜನಪದ ಕಲೆಯಾದ ಯಕ್ಷಗಾನ ಗೊಂಬೆಯಾಟದೊಂದಿಗೆ ಬದುಕನ್ನು ಸಾರ್ಥಕ ಗೊಳಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ನಿರ್ದೇಶಕ, ಅಂತರಾಷ್ಟ್ರೀಯ ಗೊಂಬೆಯಾಟ ಕಲಾವಿದ ಉಪ್ಪಿನಕುದ್ರು ಭಾಸ್ಕರ್‍ಕೊಗ್ಗ ಕಾಮತ್ ಹೇಳಿದರು. 
ಅವರು ಅ.22ರಂದು ಇತ್ತೀಚೆಗೆ ನಿಧನರಾದ ಗೊಂಬೆಯಾಟ ಕಲಾವಿದ ಎಚ್. ದಿನಕರ್ ಭಟ್ ಅವರಿಗೆ ಉಪ್ಪಿನಕುದ್ರು ಗೊಂಬೆಮನೆಯಲ್ಲಿ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ ನುಡಿ ನಮನ ಸಲ್ಲಿಸಿದರು. 
ಈ ಸಂದರ್ಭದಲ್ಲಿ ಕಲಾವಿದರಾದ ಎಂ. ರತ್ನಾಕರ್ ಪೈ, ವಿಠಲ ಕಾಮತ್, ಮಹಾಬಲೇಶ್ವರ ಶೇಟ್, ಉಮೇಶ ಸುವರ್ಣ, ರಾಮ ಬಳೆಗಾರ್, ನಾರಾಯಣ ಬಿಲ್ಲವ, ಕುಮಾರ ಮೊಗವೀರ, ಮಂಜುನಾಥ ಮೈಪಾಡಿ, ಶ್ರೀನಿವಾಸ ಶೇಟ್ ಇನ್ನಿತರು ಶ್ರದ್ದಾಂಜಲಿ ಅರ್ಪಿಸಿ, ದಿನಕರ ಭಟ್ ಅವರ ಒಡನಾಟವನ್ನು ಸ್ಮರಿಸಿಕೊಂಡು ಸ್ನೇಹಮಯಿ ವೈಕ್ತಿತ್ವದೊಂದಿಗೆ ಕಲಾ ಜಗತ್ತಿನಲ್ಲಿ 4 ದಶಕಗಳ ಕಾಲ ಅನುಪಮ ಸೇವೆ ಸಲ್ಲಿಸಿ ಎಲ್ಲರ ಹೃದಯ ಗೆದ್ದಿರುವ ಅವರ ಸಾಧನೆ ಅನನ್ಯವಾದುದು ಎಂದರು. ಪತ್ರಕರ್ತ ಸಂತೋಷ ಕೋಣಿ ಉಪಸ್ಥಿತರಿದ್ದರು. ಲೇಖಕ ಜಯವಂತ ಪೈ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com