ಜಪ್ತಿ: ದೇವಳದ ಹಿತ ಚಿಂತನಾ ಸಭೆ

ಕುಂದಾಪುರ: ಪದ್ಮಶಾಲಿ ಸಮಾಜ ಬಾಂದವರು ಆರಾಧಿಸಿಕೊಂಡು ಬಂದಿರುವ ಬಾರ್ಕೂರು ಶ್ರೀ ಬ್ರಹ್ಮಲಿಂಗೇಶ್ವರ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಹಿತ ಚಿಂತನಾ ಸಭೆ ಹುಣ್ಸೆಮಕ್ಕಿ ಜಪ್ತಿ ಶಾಮಸುಂದರ ಶೆಟ್ಟಿಗಾರರ ಮನೆಯ ವಠಾರದಲ್ಲಿ ನಡೆಯಿತು.
      ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ದೇವಳದ ಆಡಳಿತ ಮೊಕ್ತೇಸರ ಶ್ರೀನಿವಾಸ ಶೆಟ್ಟಿಗಾರ ಮಾತನಾಡಿ, ಸಂಘಟನೆಯ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದಾಗ ಸಮಾಜದ ಅಬಿವೃದ್ಧಿ ಸಾದ್ಯ. ದೇವಳದಲ್ಲಿ ಸೋಣೆಯಾರತಿ, ನವರಾತ್ರಿ, ಸತ್ಯನಾರಾಯಣ ಪೂಜೆ ಹಾಗೂ ನಿತ್ಯ ಪೂಜೆ-ಪುನಸ್ಕಾರ ಸದಾ ನಡೆದಾಗ ದೇವಳದಲ್ಲಿ ವಿಶಿಷ್ಟ ಶಕ್ತಿ ವಿಜ್ರಂಭಿಸಿ ಭಕ್ತರು ಅನುಗೃಹಕ್ಕೆ ಪಾತ್ರರಾಗುತ್ತಾರೆ ಎಂದರು.
        ಇದೇ ಸಂದರ್ಭದಲ್ಲಿ ಕಾಣಿಕೆ ರೂಪದಲ್ಲಿ ಸಂಗ್ರಹವಾದ ದೇಣಿಗೆ ಹಣವನ್ನು ಶ್ರೀಮತಿ ಸುಲೋಚನ ಶಾಮಸುಂದರ ಶೆಟ್ಟಿಗಾರ ದಂಪತಿಗಳು ದೇವಳದ ಆಡಳಿತ ಮೊಕ್ತೇಸರ ಶ್ರೀನಿವಾಸ ಶೆಟ್ಟಿಗಾರರಿಗೆ ಹಸ್ತಾಂತರಿಸಿದರು. ಅಕ್ಟೋಬರ್ ನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡೋತ್ಸವ ಬಗ್ಗೆ ಪೂರ್ವ ತಯಾರಿ ಬಗ್ಗೆ ಚರ್ಚಿಸಲಾಯಿತು.
ಅಭಿವೃದ್ಧಿ ಸಮಿತಿಯ ನಾರಾಯಣ ಶೆಟ್ಟಿಗಾರ, ಅರುಣ ಶೆಟ್ಟಿಗಾರ, ಸುರೇಶ್ ಶೆಟ್ಟಿಗಾರ, ಯುವ ಸಂಘಟನೆಯ ಚೇರ್ಕಾಡಿ ಆನಂದ ಶೆಟ್ಟಿಗಾರ, ಸಂಜೀವ ಶೆಟ್ಟಿಗಾರ, ವಿವೇಕ ಬಸ್ರೂರು, ತೊಂಬಟ್ಟು ಸುಬ್ರಾಯ ಶೆಟ್ಟಿಗಾರ, ಮಾಗಣಿ ಮುಖ್ಯಸ್ಥ ಕಾಳಿಂಗ ಶೆಟ್ಟಿಗಾರ, ಬಸ್ರೂರು ಆನಂದ ಶೆಟ್ಟಿಗಾರ ಮಹಿಳಾ ಸಂಘಟನೆಯ ಬಾನುಮತಿ ಶೆಟ್ಟಿಗಾರ್ ಇದ್ದರು. ಸುಧಾಕರ್ ಶೆಟ್ಟಿಗಾರ ಸ್ವಾಗತಿಸಿದರು. ಶ್ರೀನಿವಾಸ ಶೆಟ್ಟಿಗಾರ ವಂದಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com