ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಬಿಲ್ವ ಆಂದೋಲನ

ಕಮಲಶಿಲೆ:  ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಗ್ರೀನ್ ಇಂಡಿಯಾ ಮೂವ್‍ಮೆಂಟ್ (ರಿ) ಸಿದ್ಧಾಪುರ ಘಟಕದ ವತಿಯಿಂದ ಬಿಲ್ವವೃಕ್ಷ ಆಂದೋಲನದ ಅಂಗವಾಗಿ ಬಿಲ್ವ ಸಸಿಗಳನ್ನು ನೆಡಲಾಯಿತು.
 ಕಮಲಶಿಲೆಯ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವೇ.ಮೂ. ಹರೀಶ್ ಭಟ್ ಬಿಲ್ವ ಸಸಿಯನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇವಳದ ಪ್ರಮುಖರಾದ ವಿಷ್ಣುಮೂರ್ತಿ ಭಟ್, ಗುರುಪ್ರಸಾದ್ ಭಟ್, ಗ್ರೀನ್ ಇಂಡಿಯಾ ಮೂವ್‍ಮೆಂಟ್‍ನ ಸಿದ್ದಾಪುರ ಘಟಕದ ಅಧ್ಯಕ್ಷ ಶ್ರೀಧರ ಎಸ್, ಬಿಲ್ವ ವೃಕ್ಷ ಆಂದೋಲನದ ಸಂಚಾಲಕ ಕೆ. ಮೋಹನ ಆಚಾರ್ಯ ಕೋಟೇಶ್ವರ, ಗ್ರೀನ್ ಇಂಡಿಯಾ ಮೂವ್‍ಮೆಂಟ್ (ರಿ)ನ ವಿಶ್ವಸ್ಥರಾದ ಡಾ. ಉತ್ತಮ್‍ಕುಮಾರ್ ಶೆಟ್ಟಿ, ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com