ಅಲ್ಪಸಂಖ್ಯಾತರಿಗೆ ನೇರ ಸಾಲ ಸೌಲಭ್ಯಕ್ಕೆ; ಅರ್ಜಿ ಆಹ್ವಾನ

ಉಡುಪಿ: ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ಹಣಕಾಸು ನಿಗಮ ನೇರಸಾಲ ಯೋಜನೆಯಡಿ 2013-14 ನೇ ಸಾಲಿಗೆ ಕೃಷಿ, ತೋಟಗಾರಿಕೆ, ವಾಹನ ಹಾಗೂ ಎಲ್ಲಾ ವ್ಯಾಪಾರ ಚಟುವಟಿಕೆಗಳಿಗೆ ಘಟಕ ಒಂದಕ್ಕೆ 50,000 ರೂಪಾಯಿಯಿಂದ 1ಲಕ್ಷ ರೂಪಾಯಿವರೆಗೆ 6 ಶೇಕಡ ಬಡ್ಡಿ ದರದಲ್ಲಿ ಸಾಲವನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ , ಸಿಖ್ಖ್ ಮತ್ತು ಪಾರ್ಸಿ ಜನಾಂಗದವರು ಅರ್ಜಿ ಸಲ್ಲಿಸಬಹುದು.
ಆಸಕ್ತರು ನಿಗದಿತ ಅರ್ಜಿಗಳನ್ನು ಜಿಲ್ಲಾ ಕಚೇರಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವದ್ಧಿ ನಿಗಮ, ಜಿಲ್ಲಾಧಿಕಾರಿ ಕಚೇರಿ, ಎ ಬ್ಲಾಕ್, 1ನೇ ಮಹಡಿ, ರಜತಾದ್ರಿ, ಮಣಿಪಾಲ. ಅಥವಾ ವೆಬ್‌ಸೈಟ್ www.kmdc.kar.nic.in  ನಲ್ಲಿ ಪಡೆದು, ಭರ್ತಿಮಾಡಿದ ಅರ್ಜಿಯನ್ನು ಸೆಪ್ಟಂಬರ್ 10 ರೊಳಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0820- 2574990 ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com