ಮರವಂತೆ: ಕರ್ಕಾಟಕ ಅಮಾವಾಸ್ಯೆ

ಕುಂದಾಪುರ: ಕರ್ಕಾಟಕ ಅಮಾವಾಸ್ಯೆಯ ಪ್ರಯುಕ್ತ ಮರವಂತೆಯ ನದಿ - ಸಮುದ್ರ ನಡುವಿನ ಪ್ರಕೃತಿ ರಮ್ಯ ತಾಣವಾದ ಮಾರಸ್ವಾಮಿಯ ಪುರಾಣ ಪ್ರಸಿದ್ಧ ವರಾಹ ದೇವಸ್ಥಾನಕ್ಕೆ ಮಂಗಳವಾರ ಸಹಸ್ರಾರು ಭಕ್ತರು ಆಗಮಿಸಿದ್ದರು.
     ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಸಮುದ್ರ ಮತ್ತು ನದಿಯಲ್ಲಿ ಸ್ನಾನ ಮಾಡಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
     ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಟಾರ್‌ ಮತ್ತು ಸದಸ್ಯರು, ಅರ್ಚಕ, ಉಪಾಧಿವಂತರು, ಸಿಬಂದಿ ಮತ್ತು ಸ್ವಯಂಸೇವಕರು ಜನಜಂಗುಳಿಯನ್ನು ನಿಯಂತ್ರಿಸಿ, ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದರು.
       ಕುಂದಾಪುರ ವೃತ್ತ ನಿರೀಕ್ಷಕ ಮಂಜುನಾಥ ಕವರಿ ವ್ಯವಸ್ಥೆಯ ಉಸ್ತುವಾರಿಯಲ್ಲಿ ಗಂಗೊಳ್ಳಿ ಠಾಣಾಧಿಧಿಕಾರಿ ಎ. ಸಂಪತ್‌ ಕುಮಾರ್‌, ಕುಂದಾಪುರ ಸಂಚಾರ ಠಾಣೆಯ ಎಸ್‌.ಐ. ಇಮ್ರಾನ್‌, ಮಹಿಳಾ ಎಸ್‌.ಐ. ಸುಜಾತಾ ನೇತೃತ್ವದ ಸುಮಾರು 50ಕ್ಕೂ ಮಿಕ್ಕಿದ ಪೊಲೀಸ್‌ ಪಡೆ ಶಿಸ್ತು ಕಾಪಾಡಲು, ನದಿ, ಸಮುದ್ರದಲ್ಲಿ ಅಪಾಯ ತಡೆಯಲು ಮತ್ತು ಹೆದ್ದಾರಿಯಲ್ಲಿ ವಾಹನ ನಿಯಂತ್ರಿಸಲು ದಿನವಿಡೀ ಶ್ರಮಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com