ಹಂಗಾರಕಟ್ಟೆ: ಸಾಲಿಗ್ರಾಮ ಗುಂಡ್ಮಿಯ ಯಕ್ಷಗಾನ ಕಲಾಕೇಂದ್ರದ ಕಲಾ ಭವನದಲ್ಲಿ ಕಲಾಕೇಂದ್ರದ ಐರೋಡಿ ರಾಜಶೇಖರ ಹೆಬ್ಬಾರ್ ಅವರ ಕಚೇರಿ ಉದ್ಘಾಟನೆ ಆ.27ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಐರೋಡಿ ವೈಕುಂಠ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭ ಭಾರತೀಯ ಜೀವ ವಿಮಾ ಗ್ರಾಹಕರಿಗಾಗಿ ವಿಮಾ ಕಂತು ಸ್ವೀಕರಿಸಲು ಅನುಕೂಲವಾಗುವ 'ವಿಮಾ ಗ್ರಾಹಕ' ಸೇವೆಯನ್ನು ಭಾರತೀಯ ಜೀವ ವಿಮಾ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಕೆ.ಪಿ. ಪಂಡಿತ್ ಉದ್ಘಾಟಿಸಲಿದ್ದು, ನಂತರ ಎಲ್ಐಸಿ ಗ್ರಾಹಕ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಬ್ರಹ್ಮಾವರ ಶಾಖಾ ಪ್ರಬಂಧಕ ಜಯರಾಮ ಶೆಟ್ಟಿ, ಉಪ ಶಾಖಾ ಪ್ರಬಂಧಕ ಎಂ. ಖಲೀಲ್, ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಶೆಟ್ಟಿ, ಉದ್ಯಮಿ ಆನಂದ ಸಿ. ಕುಂದರ್ ಭಾಗವಹಿಸಲಿದ್ದಾರೆ.ಸಮಾವೇಶದ ನಂತರ 'ಶರಸೇತು ಬಂಧನ' ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಐರೋಡಿ ರಾಜಶೇಖರ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to:
Post Comments (Atom)
0 comments:
Post a Comment