ಚುಟುಕು ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಜಿ.ಯು. ನಾಯಕ್

ಉಡುಪಿ: ರಾಜ್ಯ ಚುಟುಕು ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ರಾಜ್ಯ ಉತ್ತಮ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಿ.ಯು ನಾಯಕ್ ಆಯ್ಕೆಯಾಗಿದ್ದಾರೆ. ಪ್ರೊ.ಉಪೇಂದ್ರ ಸೋಮಯಾಜಿ, ಎಚ್.ಗೋಪಾಲ ಭಟ್(ಕು.ಗೋ), ನೇಂಪು ನರಸಿಂಹ ಭಟ್, ಡಾ.ಉಪ್ಪಂಗಳ ರಾಮಭಟ್ ಮತ್ತು ಇಮದಿರಾ ಹಾಲಂಬಿ ಅವರನ್ನು ಗೌರವ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.
      ಉಪಾಧ್ಯಕ್ಷರಾಗಿ ಮೇಟಿ ಮುದಿಯಪ್ಪ, ರಾಜು ಆಚಾರ್ಯ ಬೆಳ್ಳಂಪಳ್ಳಿ, ಕಾರ್ಯದರ್ಶಿಯಾಗಿ ಪ್ರಭಾಕರ ನೀಲಾವರ, ಜೊತೆ ಕಾರ್ಯದರ್ಶಿಯಾಗಿ ಎಂ.ಫಕೀರಪ್ಪ, ದೇವದಾಸ ಶೆಟ್ಟಿ ಚೇರ್ಕಾಡಿ, ಕೋಶಾಧಿಕಾರಿಯಾಗಿ ಕೆ.ಕೃಷ್ಣಮೂರ್ತಿ ಬ್ರಹ್ಮಾವರ ಆಯ್ಕೆಯಾದರೆ ಟಿ.ಆರ್ ಗೋಪಾಲಕೃಷ್ಣ, ಸುರೇಂದ್ರ ಶೆಟ್ಟಿ ತೆಕ್ಕಟ್ಟೆ, ಸಾವಿತ್ರಿ ಮನೋಹರ್ ಕಾರ್ಕಳ, ಕುಂದಾಪುರದ ಎಚ್.ಸೋಮಶೇಖರ್ ಶೆಟ್ಟಿ, ಶಂತಪ್ಪ ಮೂಲಂಗಿಪಟ್ಲ ಸಂಘಟನಾ ಸದಸ್ಯರಾಗಿ ಆಯ್ಕೆಗೊಂಡಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com