ಕನ್ನಡ ಉಳಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು: ಆನಂದ ಸಿ.ಕುಂದರ್

ಕೋಟ: ಕನ್ನಡದ ಉಳಿವು ಕನ್ನಡ ಅಧ್ಯಾಪಕರ ಕೈಯಲ್ಲಿದೆ. ಇದನ್ನು ಮನಗಂಡು ಶಿಕ್ಷಕರು ಕಾರ್ಯ ಪ್ರವೃತ್ತರಾಗಬೇಕು ಎಂದು ಕೋಟ ಗೀತಾನಂದ ಟ್ರಸ್ಟ್‌ನ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.

ಕೋಟ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಪ್ರೌಢಶಾಲಾ ಕನ್ನಡ ಅಧ್ಯಾಪಕರ ಸಂಘ, ಬ್ರಹ್ಮಾವರ ವಲಯ ಸಹ ಶಿಕ್ಷಕರ ಸಂಘದ ಹಾಗೂ ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಸಹಯೋಗದಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ಮತ್ತು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರದಲ್ಲಿ ಆಯೋಜಿಸಿದ್ದ ಪ್ರೌಢ ಶಾಲಾ ಕನ್ನಡ ಅಧ್ಯಾಪಕರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಗಾರದ ಕುರಿತಾಗಿ ಮಾತ ನಾಡಿದ ಉಡುಪಿಯ ಟಿ.ಎಂ. ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶು ಪಾಲ ಮಹಾಬಲೇಶ್ವರ ರಾವ್ ಇಂದು ಸರ್ಕಾರ ಶಿಕ್ಷಕರಿಗೆ ರೂಪಿಸಿದ ಇಂತಹ ಕಾರ್ಯಗಾರಗಳು ಶೇ.4 ಜನ ಅಧ್ಯಾಪಕರನ್ನು ಮಾತ್ರ ತಲುಪುತ್ತಿದೆ. ಪಠ್ಯದಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಇಂತಹ ಕಾರ್ಯಗಾರಗಳು ಸಹಕಾರಿಯಾಗಿದೆ. ಶಿಕ್ಷಕರ ಜ್ಞಾನದ ದಾಹ ಪರಿಹಾರಕ್ಕೆ ಶಿಕ್ಷಕರು ಒಗ್ಗೂಡಿ ಒಂದೆಡೆ ಸೇರಿ ಮಾಹಿತಿ ಪಡೆಯಬೇಕಾದ ಅಗತ್ಯ ಇದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮತ್ತು ನಿವೃತ್ತ ಶಿಕ್ಷಕ ರಂಗಪ್ಪಯ್ಯ ಹೊಳ್ಳ, ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್ ಕೆದಿಲಾಯ, ರಂಗ ನಿರ್ದೇಶಕ ಶ್ರೀಪಾದ ಭಟ್ ಮತ್ತು ಮುನಿರಾಜ ರೆಂಜಾಲ ಉಪಸ್ಥಿತರಿದ್ದರು. ಬ್ರಹ್ಮಾವರ ವಲಯ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಬ್ರಹ್ಮಾವರ ವಲಯ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಕಿರಣ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com