ಉಗ್ರ ಯಾಸಿನ್‌ ಭಟ್ಕಳ್‌ ಸೆರೆ

ಸುದ್ದಿ: ಇಂಡಿಯನ್‌ ಮುಜಾಹಿದೀನ್‌ ಮಾಸ್ಟರ್‌ ಮೈಂಡ್‌ ಯಾಸಿನ್‌ ಭಟ್ಕಳ್‌ನನ್ನು  ಗುಪ್ತಚರ ದಳದವರು ನೇಪಾಲದಲ್ಲಿ ಗುರುವಾರ ಸೆರೆ ಹಿಡಿರುವುದಾಗಿ ವರದಿಯಾಗಿದೆ. 
ಭಟ್ಕಳ್‌ ಬಂಧನದೊಂದಿಗೆ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತಕ್ಕೆ ಭಾರೀ ದೊಡ್ಡ ವಿಜಯ ಪ್ರಾಪ್ತವಾದಂತಾಗಿದೆ.
     ಆರಂಭಿಕ ವರದಿಗಳ ಪ್ರಕಾರ ಯಾಸಿನ್‌ ಭಟ್ಕಳ್‌ನ ಬಂಧನವು ಕರ್ನಾಟಕ ಪೊಲೀಸರು ಹಾಗೂ ದಿಲ್ಲಿ ಪೊಲೀಸರು ಗುಪ್ತಚರ ದಳಕ್ಕೆ ನೀಡಿರುವ ಮಾಹಿತಿಯನ್ನು ಆಧರಿಸಿ ನಡೆದಿದೆ. ಯಾಸಿನ್‌ ಭಟ್ಕಳ್‌ನ ಬಂಧನವನ್ನು ಕೇಂದ್ರ ಗೃಹ ಸಚಿವಾಲಯ ದೃಢಪಡಿಸಿದೆ.
      ಯಾಸಿನ್‌ ಭಟ್ಕಳ್‌ ಇಂಡಿಯನ್‌ ಮುಜಾಹಿದೀನ್‌ನ, ಭಾರತದಲ್ಲಿ  ಜೀವಂತವಾಗಿ ಸಕ್ರಿಯವಾಗಿರುವ ಏಕೈಕ ಸ್ಥಾಪಕ ಸದಸ್ಯನಾಗಿದ್ದಾನೆ. ಭಾರತದಲ್ಲಿ ಇಂಡಿಯನ್‌ ಮುಜಾಹಿದೀನ್‌ ಕೈಗೊಂಡಿರುವ ಅನೇಕ ಬಾಂಬ್‌ ದಾಳಿಗಳ ಹಿಂದೆ ಯಾಸಿನ್‌ ಭಟ್ಕಳ್‌ನ ಕೈವಾಡವಿದೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com