ಹೆಮ್ಮಾಡಿ ದೇವಾಡಿಗರ ಸಂಘ ಉಚಿತ ನೋಟ್ ಪುಸ್ತಕ ವಿತರಣೆ

ಕುಂದಾಪುರ:  ಹೆಮ್ಮಾಡಿ ದೇವಾಡಿಗ ಸಮಾಜ ಸೇವಾ ಸಂಘ, ದೇವಾಡಿಗರ ಮಹಿಳಾ ಸಂಘಟನೆ ಮತ್ತು ದೇವಾಡಿಗರ ಯುವ ಸಂಘಟನೆ ಆಶ್ರಯದಲ್ಲಿ ಸಂಘದ ವ್ಯಾಪ್ತಿಯ ಹೆಮ್ಮಾಡಿ, ಕಟ್‍ಬೇಲ್ತೂರು ಮತ್ತು ದೇವಲ್ಕುಂದ ಗ್ರಾಮಗಳ ದೇವಾಡಿಗ ಸಮಾಜದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮ ಸ್ಥಳೀಯ ಹೆರಾಲ್ಡ್ ರೆಬೆಲ್ಲೋ ಸಭಾಭವನದಲ್ಲಿ ರವಿವಾರ ಜರಗಿತು.
  ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದ ಗಂಗೊಳ್ಳಿಯ ಪಂಚಗಂಗಾವಳಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಅಧ್ಯಕ್ಷ ರಾಜು ದೇವಾಡಿಗ ತ್ರಾಸಿ ಅವರು ಮಾತನಾಡಿ, ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅತ್ಯಂತ ಅಗತ್ಯವಾಗಿದೆ. ಶಿಕ್ಷಣದಿಂದ ಸಂಘಟಿತರಾಗಿ ಬಲಯುತವಾದ ಸಮಾಜವನ್ನು ನಿರ್ಮಾಣಗೊಳಿಸಲು ಸಾಧ್ಯ ಎಂದರು. ಹೆಮ್ಮಾಡಿ ದೇವಾಡಿಗರ ಸಂಘದ ಅಧ್ಯಕ್ಷ ಸುಧಾಕರ ಎನ್. ದೇವಾಡಿಗ ಅವರು ಅಧ್ಯಕ್ಷತೆ ವಹಿಸಿದ್ದರು.
  ಮುಖ್ಯ ಅತಿಥಿ ಕಾರ್ಪೋರೇಶನ್ ಬ್ಯಾಂಕ್ ವಡೇರಹೋಬಳಿ ಶಾಖೆಯ ಸೀನಿಯರ್ ಮೆನೇಜರ್ ಮಹಾಲಿಂಗ ದೇವಾಡಿಗ ಅವರು ಶಿಕ್ಷಣ ಸಾಲ ಸೌಲಭ್ಯ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳ ಕುರಿತು ಸವಿವರವಾದ ಮಾಹಿತಿಗಳನ್ನು ನೀಡಿದರು. ತಲ್ಲೂರು ಸಪ್ತಸ್ವರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ದೇವಾಡಿಗ, ಹೆಮ್ಮಾಡಿ ದೇವಾಡಿಗರ ಯುವ ಸಂಘಟನೆ ಅಧ್ಯಕ್ಷ ಅಶೋಕ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಸಂಘದ ವ್ಯಾಪ್ತಿಯ ಶಾಲೆಗಳಲ್ಲಿ ಕಲಿಯುತ್ತಿರುವ ದೇವಾಡಿಗ ಸಮಾಜದ 1-10ನೇ ತರಗತಿಯ 200 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
  ಜನತಾ ಪ್ರೌಢಶಾಲಾ ಮುಖ್ಯಶಿಕ್ಷಕ ನಂದಿ ದೇವಾಡಿಗ ಅವರು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಮಂಜು ದೇವಾಡಿಗ ಸುಳ್ಸೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಗೋಪಾಲ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಸಂಘಟನೆ ಅಧ್ಯಕ್ಷೆ ಲಲಿತಾ ಎಸ್. ದೇವಾಡಿಗ ವಂದಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com