ಶಿರೂರು ಕಾಲೇಜು: ಸ್ವಾಮಿ ವಿವೇಕಾನಂದ ಜನ್ಮವರ್ಷಾಚರಣೆ

ಬೈಂದೂರು:  ಕಲಿಕೆಯಲ್ಲಿ ನಿರೀಕ್ಷಿತ ಫಲ ಕಾಣಬೇಕಾದರೆ ಶ್ರದ್ಧೆ, ಏಕಾಗ್ರತೆಯನ್ನು ಹೊಂದುವುದು ಅತೀ ಮುಖ್ಯ. ಯುವಜನರಿಗೆ ಜೀವನಾದರ್ಶ ಹಾಗೂ ನೈತಿಕ ಮೌಲ್ಯಗಳ ಸಂದೇಶವನ್ನು ಸಾರಿದ ಸ್ವಾಮಿ ವಿವೇಕಾನಂದರ ಜೀವನ ಮತ್ತು ತತ್ವಾದರ್ಶಗಳ ಅಧ್ಯಯನದಿಂದ ವಿದ್ಯಾರ್ಥಿಗಳು ಉತ್ತಮ ಪ್ರೇರಣೆಯನ್ನು ಪಡೆಯಲು ಸಾಧ್ಯ ಎಂದು ಶಿರೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಕೃಷ್ಣಪ್ಪ ಅವರು ಹೇಳಿದರು.
   ಯಳಜಿತ್‍ನ ಶ್ರೀ ಸಿದ್ಧಿವಿನಾಯಕ ಸಾಂಸ್ಕಂತಿಕ ಕೇಂದ್ರದ ಆಶ್ರಯದಲ್ಲಿ ಶಿರೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಗಸ್ಟ್ 17ರಂದು ಜರಗಿದ ಸ್ವಾಮಿ ವಿವೇಕಾನಂದರ 150ನೇ ಜನ್ಮಜಯಂತಿ ವರ್ಷಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿದ್ಧಿವಿನಾಯಕ ಸಾಂಸ್ಕøತಿಕ ಕೇಂದ್ರದ ವತಿಯಿಂದ ಉಚಿತವಾಗಿ ಕೊಡಮಾಡಲಾದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಅವರು ಈ ಸಂದರ್ಭದಲ್ಲಿ ವಿತರಿಸಿದರು.
   ಮುಖ್ಯ ಅತಿಥಿ ಸಿದ್ಧಿವಿನಾಯಕ ಸಾಂಸ್ಕøತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ಅವರು ಸ್ವಾಮಿ ವಿವೇಕಾನಂದರ ಜೀವನ ತತ್ವಸಂದೇಶಗಳ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ಹೋಬಳಿ ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಪತ್ರಕರ್ತ ನರಸಿಂಹ ನಾಯಕ್ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
   ಉಪನ್ಯಾಸಕ ಎಂ. ಪಿ. ನಾಯಕ ಅವರು ಸ್ವಾಗತಿಸಿದರು. ಕಾರ್ಯಕ್ರಮದ ನಿರ್ದೇಶಕ ಚಂದ್ರ ಕೆ. ಹೆಮ್ಮಾಡಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಸುರೇಶ್ ಶೆಟ್ಟಿ ಅವರು ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com