18ರಂದು ಕೊಂಕಣಿ ವಿದ್ಯಾರ್ಥಿ ಸಮ್ಮಿಲನ

ಗಂಗೊಳ್ಳಿ: ಕುಂದಾಪುರದ ಜೈ ಕೊಂಕಣಿ ಸಂಸ್ಥೆ ಆಶ್ರಯದಲ್ಲಿ ಕೊಂಕಣಿ ವಿದ್ಯಾರ್ಥಿ ಸಮ್ಮಿಲನ 'ಮೋಗರೆಂ' ಆ.18ರಂದು ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಜರುಗಲಿದೆ.
ವಿದ್ಯಾರ್ಥಿಗಳು, ವಿದ್ಯಾರ್ಥಿಗಳಿಗಾಗಿ, ವಿದ್ಯಾರ್ಥಿಗಳಿಂದಲೇ ನಡೆಯುವ ಈ ಸಮ್ಮಿಲನವನ್ನು ಸಂಜೀವಿ ಕಾಮತ್ ಕೋಟೇಶ್ವರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿಖಿಲ್ ಖಾವರ್, ಭಾರತಿ ಶೆಣೈ, ವಿಘ್ನೇಶ್ ಎನ್. ಶೇಟ್, ವಿಘ್ನೇಶ್ ಭಂಡಾರ್ಕರ್, ಸ್ಟೆಫಿನ್ ಡಿ ಅಲ್ಮೇಡ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಹರೀಶ್ ನಾಯಕ್ ತೆಕ್ಕಟ್ಟೆ ವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಅಕ್ಷಯ ಕುಮಾರ್ ಶೇಟ್ ಅಧ್ಯಕ್ಷತೆ ವಹಿಸಲಿದ್ದು, ರಿಂಕಲ್ ಕ್ರಾಸ್ತಾ ಸಮಾರೋಪ ಭಾಷಣ ಮಾಡಲಿದ್ದಾರೆ. ಆದಿತ್ಯ ಖಾರ್ವಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಹುಮಾನ ವಿತರಣೆಯನ್ನು ಮುರ್ಡೇಶ್ವರ ರಥಿಕ್ ಶ್ಯಾನುಭಾಗ್ ಮಾಡಲಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com