ಸರಕಾರಿ ಆಸ್ವತ್ರೆಗೆ ವೈದ್ಯಕೀಯ ಉಪಕರಣ ನೀಡಿ ಹರಕೆ ಸಲ್ಲಿಸಿದರು!

ಉಡುಪಿ: ಹೆರಿಗೆ ನೋವು ಬಂದಾಗ ಕ್ಷೇಮಕ್ಕಾಗಿ ಆ ದೇವರಿಗೆ, ಈ ದೇವರಿಗೆ ಹರಕೆ ಹೇಳುವವರೇ ಹೆಚ್ಚು...ಆದರೆ ಅಮೆರಿಕದಲ್ಲಿ ಹೆರಿಗೆ ನೋವು ಬಂದಾಗ ವೈಜ್ಞಾನಿಕ ಹರಕೆ ಹೇಳಿಕೊಂಡ ಉಡುಪಿಯ ಹೆಣ್ಮಗಳೊಬ್ಬಳು ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ (ಅಲಂಕಾರ್ ಚಲನಚಿತ್ರ ಮಂದಿರದ ಎದುರು) ವೈದ್ಯಕೀಯ ಉಪಕರಣವೊಂದನ್ನು ಕೊಡುಗೆಯಾಗಿ ನೀಡಿದ್ದಾರೆ. 

ಅಜ್ಜರಕಾಡಿನ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಅಭಿವೃದ್ಧಿ ಸಮಿತಿ ಪದಾಧಿಕಾರಿಯೊಬ್ಬರ ಮೊಮ್ಮಗಳು ಅಮೆರಿಕದ ಆಸ್ಪತ್ರೆಯಲ್ಲಿ ಹೆರಿಗೆ ನೋವು ಅನುಭವಿಸಿದ ಸಂದರ್ಭ ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕೊಡುಗೆ ನೀಡುವ ಸಂಕಲ್ಪ ಕೈಗೊಂಡರು. 

ಹೆರಿಗೆ ಸುಲಲಿತವಾಯಿತು, ಉಡುಪಿಯ ಮಕ್ಕಳ ಆಸ್ಪತ್ರೆಗೆ ಕಳೆದ ತಿಂಗಳು ಮಕ್ಕಳ ಪರೀಕ್ಷೆ ನಡೆಸುವ ವೈದ್ಯಕೀಯ ಉಪಕರಣವೊಂದನ್ನು ಕೊಡುಗೆ ಯಾಗಿ ನೀಡಿದ್ದು ಹೆರಿಗೆ ನೋವಿನ ಸಂದರ್ಭ ದೇವರು, ನಾನಾ ಕ್ಷೇತ್ರಗಳಿಗೆ ಹರಕೆ ಹೊರುವವರಿಗೆ ಸರಕಾರಿ ಆಸ್ಪತ್ರೆಗೆ ಕೊಡುಗೆ ಪ್ರೇರಣೆಯಾಗದೇ?
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com