ಗೋಮಾಂಸ ಭಕ್ಷಣೆ ನಿಷೇಧಕ್ಕೆ ಮುಸ್ಲಿಮ್ ಒಕ್ಕೂಟ ಆಗ್ರಹ

ಪಡುಬಿದ್ರಿ: ಉಭಯ ಜಿಲ್ಲೆಗಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ದನ ಕಳ್ಳರ ಹಾವಳಿ ಮಿತಿ ಮೀರಿದ್ದು, ಇದನ್ನು ಸಂಪೂರ್ಣ ನಿಗ್ರಹಿಸಲು ಪ್ರತಿಯೊಂದು ಮುಸ್ಲಿಂ ಜಮಾತ್‌ಗಳು ಹಾಗೂ ಮೊಹಲ್ಲಾ ಕಮಿಟಿಗಳು ದನಕಳ್ಳತನಗೈಯುವ ವ್ಯಕ್ತಿಗಳಿಗೆ ನಿಷೇಧ ಹೇರಬೇಕು ಹಾಗೂ ಗೋಮಾಂಸ ಭಕ್ಷಣೆಯನ್ನು ತಮ್ಮ ತಮ್ಮ ಜಮಾತ್ ವ್ಯಾಪ್ತಿಗಳಲ್ಲಿ ನಿಷೇಧಿಸುವ ಕುರಿತು ಚಿಂತನೆ ನಡೆಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಿನಂಪ್ರತಿ ಪತ್ರಿಕೆಗಳಲ್ಲಿ ದನಕಳ್ಳ ಸಾಗಣೆ, ಅಕ್ರಮ ಮಾಂಸಗಳ ಪತ್ತೆ ಎಂಬ ಹೆಸರಿನಲ್ಲಿ ಸುದ್ದಿಗಳು ಪ್ರಕಟಗೊಳ್ಳುತ್ತಿದ್ದು, ಇದರಿಂದ ಪ್ರಾಮಾಣಿಕ ದನ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಅಲ್ಲದೇ ಇಡೀ ಮುಸ್ಲಿಂ ಸಮುದಾಯವನ್ನು ಸಂಶಯದಿಂದ ಕಾಣುವಂತಾಗಿದೆ.
ಇದೊಂದು ಅಕ್ಷಮ್ಯ ಅಪರಾಧಿ ಕೃತ್ಯವಾಗಿದ್ದು, ಇದರಲ್ಲಿ ನಿಜವಾಗಿ ಅಕ್ರಮ ಗೋ ಸಾಗಣೆಯಲ್ಲಿ ಭಾಗಿಯಾದವರಿಗೆ ನಿಷೇಧ ಹೇರುವ ಹಾಗೂ ಗೋಮಾಂಸ ಭಕ್ಷಣೆಯನ್ನೇ ನಿಷೇಧಿಸುವ ಬಗ್ಗೆ ಕೂಡಲೇ ಚಿಂತನೆ ನಡೆಸುವ ಅಗತ್ಯವಿದೆ. ಈ ಕುರಿತಂತೆ ಕರಾವಳಿ ಕರ್ನಾಟಕದಲ್ಲಿರುವ ಎಲ್ಲಾ ಖಾಝಿಗಳು ಜಮಾತ್ ಕಮಿಟಿಗಳಿಗೆ ಮೊಹಲ್ಲಾ ಕಮಿಟಿಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ಮಂಗಳೂರು, ಉಳ್ಳಾಲ, ಉಡುಪಿ, ಆತ್ರಾಡಿ, ಸೇರಿದಂತೆ ವಿವಿಧ ಖಾಝಿಗಳನ್ನು ಆಗ್ರಹಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com