ಬೀಜಾಡಿ-ಗೋಪಾಡಿ: ವನಮಹೋತ್ಸವ

ಕುಂದಾಪುರ: ಬೀಜಾಡಿ-ಗೋಪಾಡಿ ಚಂದನ ಯುವಕ ಮಂಡಲ(ರಿ) ಇವರ ವತಿಯಿಂದ ಸ್ವಾತಂತ್ರ್ಯೋತ್ಸವ  ದಿನದಂದು ಬೀಜಾಡಿ ಕೆನರಾ ಕಿಡ್ಸ್ ಶಾಲಾ ವಠಾರದಲ್ಲಿ ವನಮಹೋತ್ಸವ ಹಮ್ಮಿಕೊಳ್ಳಲಾಯಿತು.
ಬಿಲ್ವ ವೃಕ್ಷ ಆಂದೋಲನಾ ಸಮಿತಿ, ಗ್ರೀನ್ ಇಂಡಿಯಾ ಮೂವ್‍ಮೆಂಟ್ ಇದರ ಸಂಚಾಲಕರಾದ ಮೋಹನ್ ಆಚಾರ್ಯ ಸಸಿ ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೀಜಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಜನಜಾಗೃತಿ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಸಮಾಜ ಸೇವಕ ವಾಸುದೇವ ಪ್ರಭು, ಚಂದನ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಉಪಾಧ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಿಲ್ವ, ಸಂಪಿಗೆ, ಶ್ರೀಗಂಧ, ರಾಮಪತ್ರೆ, ಕಹಿಬೇವು ಮುಂತಾದ ಜಾತಿಯ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಲಲಿತಾ ನಾಗರಾಜ್ ಪ್ರಾರ್ಥಿಸಿದರು. ಜಿ.ಆರ್.ಗೋಪಾಲ್ ಸ್ವಾಗತಿಸಿದರು. ಗೋಪಿನಾಥ್ ನಿರೂಪಿಸಿದರು. ಶ್ರೀಧರ್ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com