ಜ್ಞಾನ ವಿಕಾಸ ಯೋಗ ಕುಟುಂಭೋತ್ಸವ

ಕುಂದಾಪುರ: ದೈಹಿಕ ವ್ಯಾಯಾಮ ಆಸನಗಳಿಂದ ಮುಂದುವರಿದು ಮನಸ್ಸು ಮತ್ತು ಬುದ್ಧಿಯನ್ನು ನಿಯಂತ್ರಿಸಿ ಕ್ರಿಯೆ ಮತ್ತು ಪ್ರಜ್ಞೆಯನ್ನು ಒಂದೇ ಕಡೆ ಕೇಂದಿಕ್ರಸಿದಾಗ ಹಿಡಿದ ಕೆಲಸವನ್ನು ತಮ್ಮ ಇಚ್ಚೆಯಂತೆ ಸಾಧಿಸುವುದೇ ಯೋಗ ಎಂದು ಬಸ್ರೂರು ಶ್ರೀ ಕಾಲೇಜಿನ ಉಪನ್ಯಾಸಕರಾದ ರಾಧಾಕೃಷ್ಣ ಹೇಳಿದರು.
ಅವರು ಹುಣ್ಸೆಮಕ್ಕಿಯಲ್ಲಿ ಆರೋಗ್ಯ ಮತ್ತು ಸಾಂಸ್ಕøತಿಕ ವಿಕಾಸ ಕೇಂದ್ರ ಬ್ರಹ್ಮಾವರ, ಜ್ಞಾನ ವಿಕಾಸ ಯೋಗ ಕುಂದಾಪುರ, ಪ್ರಗತಿ ಯುವಕ ಮಂಡಲ ಹುಣ್ಸೆಮಕ್ಕಿ, ಶಾಲಾಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಜ್ಞಾನ ವಿಕಾಸ ಯೋಗ ಶಿಬಿರಾರ್ಥಿಗಳಿಂದ ಕುಟುಂಭೋತ್ಸವ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಮೌನ, ಉಸಿರಾಟ, ಅಹಂ ಯೋಗದ ಮೂಲಕ ಹಿಡಿತ ಸಾಧಿಸಿ ಜನರ ನೋವುಗಳಿಗೆ ಸ್ಪಂದನೆ, ತ್ಯಾಗ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಹೇಳಿದರು. ಹಿರಿಯ ಯೋಗ ಸಾಧಕ ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು.
       ಜ್ಞಾನ ವಿಕಾಸ ಯೋಗ ಮುಖ್ಯ ತರಬೇತುದಾರೆ ಶ್ರೀಮತಿ ಮುಕ್ತಾ ಮಾತಾಜಿ ಆರ್ಶೀವಚಿಸಿ, ಜ್ಞಾನ ಮತ್ತು ಆರೋಗ್ಯ ಮನುಷ್ಯನ ನಿಜವಾದ ಸಂಪತ್ತು. ದೇಹಕ್ಕೆ ವಿದ್ಯೆ ನೀಡುವುದರ ಜೊತೆಗೆ ಮನಸ್ಸಿಗೆ ವಿದ್ಯೆ ನೀಡಿದಾಗ ಕೌಟುಂಬಿಕ ಸಂಬಂಧ, ಮಾನವೀಯ ಮೌಲ್ಯ, ಉತ್ತಮ ವ್ಯಕ್ತಿತ್ವ ಬೆಳೆಯುದರೊಂದಿಗೆ ಸಂಸ್ಕಾರಯುತ ಸದೃಡ ಸಮಾಜ ಬೆಳೆಯಲು ಸಾದ್ಯ ಎಂದರು.
ಇದೇ ಸಂದರ್ಭದಲ್ಲಿ ಸಮಾಜದಲ್ಲಿನ ಅಪರಾದ ಮತ್ತು ದುಷ್ಕøತ್ಯ ತಡೆಗಟ್ಟು ಕುರಿತು ಬೃಹ್ಮಾವರ ವೃತ್ತ ನಿರೀಕ್ಷಕ ಡಿ.ಟಿ. ಪ್ರಭು ಉಪಯುಕ್ತ ಮಾಹಿತಿ ನೀಡಿದರು. ಯುಜನ ಸೇವಾ ಸಹಾಯಕ ಕ್ರೀಡಾಧಿಕಾರಿ ದಿನಕರ್ ಹೆಗ್ಡೆ, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ರತ್ನಾಕರ್ ಶೆಟ್ಟಿ ಬ್ರಹ್ಮಾವರ ಎಸ್‍ಐ ಅಶೋಕ್ ಉಪಸ್ಥಿತರಿದ್ದರು.
     ಶಿಬಿರಾರ್ಥಿಗಳಾದ ಶ್ರೀನಿವಾಸ ಪ್ರಭು, ನಾರಾಯಣ ಗಟ್ಟಿ, ವಿಜಯ, ರಘುರಾಮ ಮಧುರ ನಾಯಕ್, ಗೀತಾ, ದಿನೇಶ್, ರತ್ನಾಕರ್ ಶೆಟ್ಟಿ ಯೋಗದ ಅನುಭವಗಳನ್ನು ಕುಟುಂಭದವರೊಂದಿಗೆ ಹಂಚಿಕೊಂಡರು. ಮೆಸ್ಕಾಂ ಅಧಿಕಾರಿ ಕಾರ್ಯಕ್ರಮ ಸಂಯೋಜಿಸಿದ್ದರು. ಉಪನ್ಯಾಸಕ ಸುಧಾಕರ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಶೆಟ್ಟಿ ಸ್ವಾಗತಿಸಿದರು. ಸದಾನಂದ ಶಾನುಬಾಗ್ ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ ಪೂಜಾರಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com