ಮಂಗಳೂರು-ಮಡಗಾಂವ್‌ ಇಂಟರ್ಸಿಟಿ ರೈಲು- ಡಿಸೆಂಬರ್‌ನಲ್ಲಿ ಆರಂಭ

ಕುಂದಾಪುರ: ರೈಲ್ವೆ ಬಜೆಟ್‌ನಲ್ಲಿ ಘೋಷಣೆಯಾದ ಮಂಗಳೂರು-ಮಡಗಾಂವ್‌ ಇಂಟರ್ಸಿಟಿ ರೈಲು ಡಿಸೆಂಬರ್‌ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದು ಸಂಸದ ಜಯಪ್ರಕಾಶ್‌ ಹೆಗ್ಡೆ ತಿಳಿಸಿದ್ದಾರೆ.
      ಇದರೊಂದಿಗೆ ಭಟ್ಕಳ-ತೋಕುರು ಡಿ.ಎಂ.ಯು. ರೈಲು ಡಿಸೆಂಬರ್‌ ಕೊನೆಯ ವಾರದಲ್ಲಿ ಆರಂಭವಾಗಲಿದೆ ಎಂದು ಹೇಳಿದ ಅವರು, ರೈಲ್ವೇ ಸಚಿವರು ಮತ್ತು ರೈಲ್ವೇ ಮಂಡಳಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರಲ್ಲದೇ ಕುಂದಾಪುರದಲ್ಲಿ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳುವುದಾಗಿ ಸಂಸ‌ದರು ತಿಳಿಸಿದ್ದಾರೆ.
     ಈಗಾಗಲೆ ಮಂಗಳೂರು ,ಉಡುಪಿ, ಸುರತ್ಕಲ್‌, ಭಟ್ಕಳ, ಕುಮಟ, ಕಾರವಾರ, ಕಾಣಕೊಣ ಮತ್ತು ಮಡಗಾಂವ್‌ಗಳಿಗೆ ನಿಲುಗಡೆ ಘೋಷಿಸಲಾಗಿದೆ. ಮಂಗಳೂರಿನಿಂದ ಬೆಳಗ್ಗೆ 8.15ಕ್ಕೆ ಬಿಡುವ ಈ ರೈಲು ಮಧ್ಯಾಹ್ನ 2ಕ್ಕೆ ಮಡಗಾಂವ್‌ ತಲುಪುವುದು. ಮಡಗಾಂವ್‌ನಿಂದ ಸಂಜೆ 4.15ಕ್ಕೆ ಹೊರಟು ರಾತ್ರಿ 10ಕ್ಕೆ ಮಂಗಳೂರು ತಲುಪುವುದು. ಹೊಸ ವೇಳಾಪಟ್ಟಿಯಲ್ಲಿ ಕಂಕನಾಡಿಗೆಗೆ ತಲುಪುವುದು ಎಂದು ತಪ್ಪಾಗಿ ಮುದ್ರಿತವಾಗಿದ್ದು , ಮಂಗಳೂರಿಗೆ ಹೋಗುವ ರೈಲಿಗೆ ಸುರತ್ಕಲ್‌ನಲ್ಲಿ ನಿಲುಗಡೆ ಇದೆ. ಈ ಇಂಟರ್ಸಿಟಿ ರೈಲಿಗೆ ಮಧ್ಯಾಹ್ನ 3ಕ್ಕೆ ದಿಲ್ಲಿಗೆ ಹೋಗುವ ವಾಸ್ಕೊ-ನಿಜಾಮುದ್ದಿನ್‌(ಗೋವಾ ಎಕ್ಸ್‌ಪ್ರೆಸ್‌)ವೇಳಾಪಟ್ಟಿಗೆ ಸರಿಪಡಿಸಿದ್ದು ಲೊಂಡ, ಬೆಳಗಾಂವ್‌, ಪುಣೆ, ದಿಲ್ಲಿ, ಶಿರ್ಡಿಗೆ ಹೋಗುವ ಕರಾವಳಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ನಿಜಾಮುದ್ದಿನ್‌-ಮಡಗಾಂವ್‌ ಸಂಪರ್ಕಕ್ರಾಂತಿ ಎಕ್ಸ್‌ಪ್ರೆಸ್‌ ರೈಲು ಮಧ್ಯಾಹ್ನ 3.55ಕ್ಕೆ ಮಡಗಾಂವ್‌ ತಲುಪಲಿದ್ದು, ಸಂಜೆ 4.15ಕ್ಕೆ ಮಡಗಾಂವ್‌ನಿಂದ ಮಂಗಳೂರು ಕಡೆ ಹೋಗುವ ಇಂಟರ್ಸಿಟಿ ಎಕ್ಸ್‌ಪ್ರೆಸ್‌ ಉತ್ತರ ಭಾರತದಿಂದ ಮಂಗಳೂರು ಕಡೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಇದರ ಅನುಕೂಲ ಪಡೆಯಬಹುದಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com