ಚಡಗ ಪ್ರಶಸ್ತಿಗೆ ಕಾದಂಬರಿ ಆಹ್ವಾನ

ಕುಂದಾಪುರ: ಕೋಟೇಶ್ವರ ಎನ್‌ಆರ್‌ಎಎಂಎಚ್ ಪ್ರಕಾಶನ ಕೊಡಮಾಡುವ 2013ನೇ ಸಾಲಿನ ದಿ. ಪಾಂಡೇಶ್ವರ ಸೂರ್ಯನಾರಾಯಣ ಚಡಗ ಪ್ರಶಸ್ತಿಗಾಗಿ 2012ರಲ್ಲಿ ಪ್ರಥಮ ಆವೃತ್ತಿಯಾಗಿ ಹೊರಬಂದ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕಥಾ ಹಂದರವನ್ನು ಒಳಗೊಂಡಿರಬೇಕು, ಸ್ವಂತ ರಚನೆಯಾಗಿರಬೇಕು. ಪ್ರಶಸ್ತಿಯು ರು. 10 ಸಾವಿರ ನಗದು, ಶಾಲು, ಸ್ಮರಣಿಕೆಗಳನ್ನು ಒಳಗೊಂಡಿದೆ. ಲೇಖಕರು ಕಾದಂಬರಿಯ 4 ಪ್ರತಿಗಳನ್ನು ಆ. 30ರೊಳಗೆ- ಕೆ. ಶಾರದಾ ಭಟ್, ಸಂಚಾಲಕಿ, ಪ್ರಶಸ್ತಿ ಸಮಿತಿ, 58, ಶಾಂತಾನಂದ ರೆಸಿಡೆನ್ಸಿ, ಮಿಶನ್ ಆಸ್ಪತ್ರೆ ರಸ್ತೆ, ಉಡುಪಿ - 576101 ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9449233462 ಅಥವಾ 0820- 2535462 ಸಂಪರ್ಕಿಸಬಹುದು ಎಂದು ಸಂಚಾಲಕಿ ಕೆ. ಶಾರದಾ ಭಟ್ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com