ಕೊಲ್ಲೂರಿಗೆ ಭೇಟಿ ನೀಡಿದ ನಟಿ ಮಂಜು ವಾರಿಯರ್‌

ಕೊಲ್ಲೂರು: ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳ ಚಿತ್ರನಟಿ ಮಂಜು ವಾರಿಯರ್‌ ಕುಟುಂಬ ಸಮೇತರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

'ಕಣ್ಣೆಳುತಿ ಪಟ್ಟಂ ತೊಟ್ಟು' ಎಂಬ ಮಲಯಾಳ ಚಿತ್ರದಲ್ಲಿ ಅತ್ಯತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಗಳಿಸಿದರುವ ಮಂಜುವಾರಿಯರ್‌ 18ನೇ ವಯಸ್ಸಿನಲ್ಲಿ ಸಿನೆಮಾ ರಂಗ ಪ್ರವೇಶಿಸಿದ್ದರು. ಕನ್ಮದಮ್‌, ಆರಾನ್‌ ತುಂಬುರಾವ್‌, ಸಮ್ಮರ್‌ ಇನ್‌ ಚಿತ್ಲಹೆಮ್‌, ಪತ್ರಮ್‌, ಮೀನಾಕ್ಷಿ ಮೊದಲಾದ ಅನೇಕ ಬಾಕ್ಸ್‌ ಆಫೀಸ್‌ ಹಿಟ್‌ ಚಿತ್ರಗಳಲ್ಲಿ ಮೋಹನ್‌ಲಾಲ್‌, ಸುರೇಶ್‌ ಗೋಪಿ, ದಿಲೀಪ್‌ರೊಡನೆ ನಟಿಸಿ ಐದು ಬಾರಿ ಕೇರಳ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ದೂರ ಸರಿದಿದ್ದ ಮಂಜುವಾರಿಯರ್‌ ಹಾಗೂ ದಿಲೀಪ್‌ ನಡುವಿನ ಸಂಬಂಧ ಮುರಿತ ಗಾಸಿಪ್‌ ಮೂಲಕ ಪ್ರಚಾರ ಗಿಟ್ಟಿಸಿತ್ತು. ಇದೀಗ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಈಕೆ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಜತೆ ಕಲ್ಯಾಣ್‌ ಜುವೆಲ್ಲರ್ ಟಿ.ವಿ. ಜಾಹಿರಾತಿನಲ್ಲಿ ನಟಿಸಿ ಮತ್ತೆ ಸಿನೆಮಾ ರಸಿಕರ ಗಮನ ಸೆಳೆದಿದ್ದಾರೆ.

ಕನ್ನಡದಲ್ಲೂ ನಟಿಸುವಾಸೆ
       ತಂದೆ-ತಾಯಿ ಜತೆಗೆ ಕೊಲ್ಲೂರಿಗೆ ಆಗಮಿಸಿದ ಮಂಜು ವಾರಿಯರ್‌ ತನ್ನ ಸಿನೆಮಾ ಜೀವನದ ಅನುಭವವನ್ನು ಹಂಚಿಕೊಂಡರಲ್ಲದೇ ಅವಕಾಶ ಸಿಕ್ಕರೆ ಕನ್ನಡ ಚಿತ್ರದಲ್ಲೂ ನಟಿಸುವುದಾಗಿ ಹೇಳಿದರು.

ಗಾಸಿಪ್‌ ಭಯ
    ದಿಲೀಪ್‌ ಹಾಗೂ ಮಂಜು ದಾಂಪತ್ಯ ಜೀವನದ ಗಾಳಿ ಸುದ್ದಿ ಬಗ್ಗೆ ಗಮನಸೆಳೆದಾಗ ಎಲ್ಲ ಕಟ್ಟು ಕಥೆ, ಕಾಲಚಕ್ರದಲ್ಲೂ ಏರುಪೇರು ಸಾಮಾನ್ಯ ಎಂದರು. ತನ್ಮಧ್ಯೆ ಛಾಯಾಚಿತ್ರ ತೆಗೆಯಲು ಒಲ್ಲದ ಮಂಜು ವಾರಿಯರ್‌ ಮಾಧ್ಯಮದವರ ಗಾಸಿಪ್‌ ಸುದ್ದಿಗಳಿಗೆ ತಾನು ಬೆದರುವುದಾಗಿ ಹೇಳಿದ್ದಾರೆ.

ಬೇರೆ ಹೆಸರು !
     ಕೊಲ್ಲೂರು ಕ್ಷೇತ್ರಕ್ಕೆ ಸದ್ದುಗದ್ದಲವಿಲ್ಲದೇ ಆಗಮಿಸಿದ ಮಂಜುವಾರಿಯರ್‌ ದೇವಳದ ಕೌಂಟರ್‌ನಲ್ಲಿ ತನ್ನ ಹೆಸರನ್ನು ಬದಲಿಸಿ ನೀಡಿದ್ದರು. ಮತ್ತೆ ಸಿನೆಮಾ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿರುವ ಆಕೆ ಶ್ರೀದೇವಿಯ ದರ್ಶನ ನನ್ನಲ್ಲಿ ಹೊಸ ಚೈತನ್ಯ ತುಂಬಿದೆ ಎಂದಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com