ವಂಡ್ಸೆ ಸ. ಪ. ಕಾಲೇಜಿನಲ್ಲಿ ಬಿಲ್ವ ಆಂದೋಲನ

ಕುಂದಾಪುರ: ಔಷದೀಯ ಗುಣವನ್ನು ಹೊಂದಿರುವ ಬಿಲ್ವವನ್ನು ಉಳಿಸಿ ಬೆಳಸಿದರೆ ನಮ್ಮ ಆರೋಗ್ಯವು ಉಳಿಯುತ್ತದೆ, ದಿನದಿಂದ ದಿನಕ್ಕೆ ಏರುತ್ತಿರುವ ಜಾಗತಿಕ ತಾಪಮಾನವು ತಗ್ಗುತ್ತದೆ. ಇದರಿಂದ ಮನುಕುಲದ ಉಳಿವು ಸಾಧ್ಯ ಆದುದರಿಂದ ವಿದ್ಯಾರ್ಥಿ ಜೀವನದಿಂದಲೇ ಸಸ್ಯಗಳ ಬಗ್ಗೆ ಕಾಳಜಿ ಮೈಗೂಡಿಸಿ ಕೊಂಡಾಗ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳ ಸಂರಕ್ಷಣೆ ಸಾಧ್ಯ ಎಂದು ಬಿಲ್ವ ವೃಕ್ಷ ಆಂದೋಲನ ಸಂಚಾಲಕ ಎನ್‌. ಮೋಹನ ಆಚಾರ್ಯ ಕೋಟೇಶ್ವರ ಹೇಳಿದರು.

ಅವರು ವಂಡ್ಸೆ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಹಸಿರು ಪಡೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬಿಲ್ವ ವೃಕ್ಷ ಆಂದೋಲನದ ಅಂಗವಾಗಿ ಬಿಲ್ವ ವೃಕ್ಷದ ಮಹತ್ವದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಗ್ರೀನ್‌ ಇಂಡಿಯಾ ಮೂವ್‌ಮೆಂಟ್‌ (ರಿ)ನ ವಿಶ್ವಸ್ಥ ಸಂತೋಷ ಕೋಣಿ ಮಾತನಾಡಿ, ಹಸಿರು ಪರಿಸರದ ಬಗ್ಗೆ ಕಾಳಜಿಯನ್ನು ಬೆಳಸಿಕೊಂಡು ಪ್ರತಿಯೊಬ್ಬರು ಉಪಯುಕ್ತ ಸಸಿಗಳನ್ನು ನೆಟ್ಟು ಪೋಷಣೆ ಮಾಡಿದರೆ ಪ್ರಕೃತಿಗೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಮಕ್ಕಳಲ್ಲಿ ಸಸ್ಯಗಳನ್ನು ಪೋಷಿಸಿ ಬೆಳಸುವ ಬಗ್ಗೆ ಚಿಂತನೆ ಅವಶ್ಯಕ ಎಂದರು.

ಈ ಸಂದರ್ಭದಲ್ಲಿ ಅಧ್ಯಾಪಕ ಸಂತೋಷ ಕುಮಾರ್‌ ಶೆಟ್ಟಿ, ರೋಬೋ ಸಾಪ್ಟ್ ಉದ್ಯೋಗಿ ರಾಘವೇಂದ್ರ ಉಡುಪ ನೇರಳಕಟ್ಟೆ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ವಂಡ್ಸೆ ಶಾಲೆಯ ಮುಖ್ಯ ಶಿಕ್ಷಕ ರಾಜೀವ ಶೆಟ್ಟಿ ಬಿಲ್ವ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಾಥಮಿಕ ಶಾಲೆಯ ಶಿಕ್ಷಕ ವಸಂತರಾಜ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com